ಲಖೀಂಪುರ: ಉತ್ತರ ಪ್ರದೇಶದ ಲಖೀಂಪುರ ಹಿಂಸಾತ್ಮಕ ಘಟನೆಗೆ ಸಂಬಂಧಿಸಿಂದಂತೆ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಮೇಲೆ ತೀವ್ರ ಆರೋಪಗಳು ಕೇಳಿಬಂದಿತ್ತು. ಸುಪ್ರೀಂ ಕೋರ್ಟ್ ಕೂಡ ಸರ್ಕಾರಕ್ಕೆ ಖಡಕ್ ಆಗಿಯೇ ಬಿಸಿ ಮುಟ್ಟಿಸಿತ್ತು. ಅಷ್ಟೇ ನೋಡಿ ಇವತ್ತು ಕ್ರೈಂ ಬ್ರ್ಯಾಂಚ್ ಕಚೇರಿಗೆ ಹಾಜರಾಗಿಯೇ ಬಿಟ್ಟರು ಮಿಸ್ಟರ್ ಆಶಿಶ್ ಮಿಶ್ರಾ.
ಉತ್ತರ ಪ್ರದೇಶದ ಲಖೀಂಪುರನ ರೈತರ ಪ್ರತಿಭೆಟನೆಯು ಹಿಂಸಾತ್ಮಕ ಮತ್ತು ರೈತರ ಸಾವಿನಲ್ಲಿ ಅಂತ್ಯವಾಗಿದ್ದು ಗೊತ್ತೇ ಇದೆ. ಇಡೀ ದೇಶವೂ ಈ ಘಟನೆಯನ್ನ ಖಂಡಿಸುತ್ತಲೇ ಇದೆ. ಈ ಘಟನೆ ಬಳಿಕ ಈ ಕೃತ್ಯಕ್ಕೆ ಕಾರಣವಾದರೆನ್ನಲಾದ ಸಚಿವರ ಮಗ ಆಶಿಶ್ ಮಿಶ್ರಾ ಕಣ್ಮರೆಯಾಗಿದ್ದ. ಘಟನೆ ನಡೆದು ವಾರಗಳೇ ಕಳೆದರೂ ಕೂಡ ಉತ್ತರ ಪ್ರದೇಶದ ಪೊಲೀಸ್ ಸುಮ್ಮನೆ ಕುಳಿತ್ತಿತ್ತು.ಸುಪ್ರೀಂ ಕೋರ್ಟ್ ಯಾವಾಗ ಸರ್ಕಾರಕ್ಕೆ ಬಿಸಿ ಮುಟ್ಟಿಸಿತೋ ಆವಾಗ್ಲೇ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಹೊರಗೆ ಬಂದಿರೋದು ಪೊಲೀಸ್ ವಿಚಾರಣೆಗೂ ಹಾಜರಾಗಿರೋದು.
ಆಶಿಶ್ ಮಿಶ್ರಾ ಅಂದು ರೈತರ ಪ್ರತಿಭಟೆಯಲ್ಲಿ ಏನ್ ಮಾಡ್ತಿದ್ದರೋ ಏನೋ. ರೈತರ ಹೋರಾಟ ಹತ್ತಿಕೋ ಕೆಲಸವೋ ಏನೋ. ಕಪ್ಪು ಕಾರ್ ಅಲ್ಲಿ ಬಂದು ಇಡೀ ಪ್ರತಿಭಟೆಯ ದಿಕ್ಕನ್ನೆ ಬದಲಿಸಿದ್ದು ವೈರಲ್ ಆದ ವೀಡಿಯೋದಲ್ಲಿ ಸ್ಪಷ್ಟವಾಗಿಯೇ ತಿಳಿಯುತ್ತದೆ. ಆದರೆ ಉತ್ತರ ಪ್ರದೇಶದ ಕ್ರೈಂ ಬ್ರ್ಯಾಂಚ್ ಆಶಿಶ್ ಗೆ ಸಮನ್ಸ್ ನೀಡಿ ಇವತ್ತು ವಿಚಾರಣೆಗೆ ಕರೆದಿದೆ. ವಿಚಾರಣೆ ನಂತರ ಏನ್ ಆಗುತ್ತದೆ ಅನ್ನೋದು ಈಗೀನ ಪ್ರಶ್ನೆ.
PublicNext
09/10/2021 12:51 pm