ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್ ಸಿಎಂ ಚನ್ನಿ ಮೇಲಿನ 'ಮೀ ಟೂ' ಕೇಸ್ ಇನ್ನೂ ಇತ್ಯರ್ಥವಾಗಿಲ್ಲ; ಏನಿದು ಪ್ರಕರಣ?

ಚಂಡೀಗಢ: ಪಂಜಾಬ್ ನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಚರಂಜಿತ್ ಸಿಂಗ್ ಚನ್ನಿ ಅವರ ಮೇಲೆ ಮೀ ಟೂ ಆರೋಪ ಮತ್ತೆ ಕೇಳಿ ಬಂದಿದೆ.

ಚನ್ನಿ ಅವರು 2018ರಲ್ಲಿ ಐಎಎಸ್ ಅಧಿಕಾರಿಯೊಬ್ಬರಿಗೆ ಅನುಚಿತ ಮೆಸೇಜ್ ಕಳುಹಿಸಿದ್ದರು ಎಂಬ ಆರೋಪ ಅವರ ಮೇಲಿತ್ತು. ಈ ಕೇಸ್ ಈಗಲೂ ಇತ್ಯರ್ಥವಾಗಿಲ್ಲ. ಅದಕ್ಕೂ ಮುನ್ನವೇ ಸಿಎಂ ಸ್ಥಾನ ಕೊಟ್ಟು ಕಾಂಗ್ರೆಸ್ ಒಳ್ಳೆ ಕೆಲಸ ಮಾಡಿದೆ ಎಂದು ಬಿಜೆಪಿ ಟಾಂಗ್ ನೀಡಿದೆ.

ಮುಂದೆ ಈ ಪ್ರಕರಣ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಈಗಾಗಲೇ ಸಿಎಂ ಚರಂಜಿತ್ ಸಿಂಗ್ ಅವರಿಗೆ ತಳಮಳ ಶುರುವಾಗಿದೆ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

20/09/2021 03:16 pm

Cinque Terre

68.78 K

Cinque Terre

2