ತುಮಕೂರು: ದೇಶದಲ್ಲಿ ಬುರ್ಖಾ ನಿಷೇಧ ಮಾಡಬೇಕು ಎಂದು ಹೇಳಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸೊಗಡು ಶಿವಣ್ಣ ನಮ್ಮ ಸಂಸ್ಕೃತಿಯಲ್ಲಿ ಯಾವತ್ತು ಬುರ್ಕಾ ಇರಲಿಲ್ಲ. ಮೊದಲು ಆ ಬುರ್ಕಾ ನಿಷೇಧ ಮಾಡಬೇಕು. ಈ ಕಾನೂನು ಬೇಡ ಎನ್ನುವವರು ತಾಲಿಬಾನಿಗಳು ಎಂದಿದ್ದರು.
ಇಂತಹ ಹೇಳಿಕೆ ನೀಡುವ ಮೂಲಕ ಸೊಗಡು ಶಿವಣ್ಣ ಅವರು ನಮ್ಮ ಧಾರ್ಮಿಕ ಭಾವನೆ ಕೆರಳಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಬುರ್ಹಾನ್ ಎಂಬವರು ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
11/09/2021 10:29 am