ಮೈಸೂರು: ಜಿಲ್ಲೆಯ ಚಾಮುಂಡಿ ಬೆಟ್ಟ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ ನಡೆದರೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 376ರ ಅಡಿ ಯಾಕೆ ಕೇಸ್ ಯಾಕೆ ಹಾಕಲಿಲ್ಲ? ಅಲ್ಲಿ ಅತ್ಯಾಚಾರ ಆಗಿರೋದು ಸ್ಪಷ್ಟ. ಆದರೂ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಕೇಸ್ ಯಾಕೆ ದಾಖಲಾಗಿಲ್ಲ? ಎಂದು ವಿ.ಎಸ್ ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ವಿ.ಎಸ್ ಉಗ್ರಪ್ಪ, ತಿಂಗಳಲ್ಲಿ ಮೈಸೂರಿನಲ್ಲಿ ಮೂರು ಮರ್ಡರ್ ಗಳಾಗಿವೆ, ಮೂರು ದರೋಡೆ, 16 ಕಳ್ಳತನಗಳಾಗಿವೆ. ಒಂದು ಶೂಟೌಟ್ ಆಗಿದೆ. ಸರಸ್ವತಿಪುರಂನಲ್ಲಿ ಇವತ್ತು ಬಾಲಕಿ ಅತ್ಯಾಚಾರ ಕೇಸ್ ದಾಖಲಾಗಿದೆ. ಅತ್ಯಾಚಾರ ನಡೆದ್ರೂ 376ರ ಅಡಿ ಕೇಸ್ ಯಾಕೆ ಹಾಕಲಿಲ್ಲ? ಗ್ಯಾಂಗ್ ರೇಪ್ ಮಾಡಿರುವುದು ಸ್ಪಷ್ಟವಾಗಿದೆ. ರೇಪ್ ಬಿಟ್ಟು ಕಿರುಕುಳ ಕೇಸ್ ದಾಖಲಿಸಿದ್ದಾರೆ? ಹಿಂದೆ ವಿಬ್ ಗಯಾರ್ ಶಾಲೆಯಲ್ಲಿ ಪ್ರಕರಣ ಆಗಿತ್ತು ಆಗ ನೀವು ಏನಂತ ಬಾಯಿ ಬಡಿದುಕೊಳ್ತಿದ್ರಿ ಎಂದು ಪ್ರಶ್ನಿಸಿದ ಉಗ್ರಪ್ಪ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
PublicNext
26/08/2021 05:59 pm