ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಎಪಿ ನಾಯಕರಿಂದ ಕಿರುಕುಳ: ಕಟ್ಟಡ ಮಾಲೀಕರ ಆರೋಪ

ಆನೇಕಲ್: ಎಎಪಿ ನಾಯಕರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಬಾಡಿಗೆ ಕೊಟ್ಟ ಕಟ್ಟಡ ಮಾಲೀಕರೊಬ್ಬರು ಆರೋಪಿಸಿದ್ದಾರೆ.

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಕಸವನಹಳ್ಳಿಯಲ್ಲಿ ಎಎಪಿ ಮುಖಂಡರು ವಾಣಿಜ್ಯ ಮಳಿಗೆ ತೆರೆಯಲೆಂದು ಕಟ್ಟಡವನ್ನು ಬಾಡಿಗೆಗೆ ಪಡೆದು, ಅದರಲ್ಲಿ ಪಕ್ಷದ ಕಚೇರಿ ತೆರೆದಿದ್ದಲ್ಲದೆ ವಿನಾಕಾರಣ ಕಟ್ಟಡ ಮಾಲೀಕರು ಹಾಗೂ ಮಹದೇವಪುರ ಕ್ಷೇತ್ರದ ಶಾಸಕರ ಹೆಸರಿಗೆ ಕಳಂಕ ತರುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವಾಣಿಜ್ಯ ಮಳಿಗೆ ಉದ್ದೇಶಕ್ಕಾಗಿ ಎಂದು ಹೇಳಿದ ಎಎಪಿ ನಾಯಕರು ಅದರಲ್ಲಿ ತಮ್ಮ ಪಕ್ಷದ ಕಚೇರಿ ಆರಂಭಿಸಿದ್ದಾರೆ. ಇದಕ್ಕೆ ಕಟ್ಟಡ ಮಾಲೀಕರು, ನಮ್ಮ ಕಟ್ಟಡದಲ್ಲಿ ರಾಜಕೀಯ ಪಕ್ಷದ ಕಚೇರಿಗೆ ಅವಕಾಶವಿಲ್ಲ ಎಂದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಲೀಕರ ಮೇಲೆ ಎಎಪಿ ನಾಯಕರು ಈ ರೀತಿ ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

18/08/2021 09:33 am

Cinque Terre

55.74 K

Cinque Terre

2

ಸಂಬಂಧಿತ ಸುದ್ದಿ