ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್ ಮನೆಗೆ ಲಗ್ಗೆ ಇಟ್ಟು ಅಕ್ರಮ ಹಣ ವರ್ಗಾವಣೆ ಬಗ್ಗೆ ಸತತ ತನಿಖೆ ನಡೆಸುತ್ತಿದ್ದಾರೆ. ಬೆಳಗಿನಿಂದ ಇಲ್ಲಿಯವರೆಗೆ ವಿಚಾರಣೆ ನಡೆದೇ ಇದೆ. ಈ ವೇಳೆ ಜಮೀರ್ ಮನೆಗೆ ಬೆಳಿಗ್ಗೆ ಹಾಲು ಹಾಕಲು ಬಂದಿದ್ದ ವ್ಯಕ್ತಿ ಒಳಗೆ ಇದ್ದಾರೆ. ಆತನನ್ನು ಹೊರಗೆ ಬಿಡಲು ಇ.ಡಿ ಅಧಿಕಾರಿಗಳು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಾಲು ಹಾಕಲು ಬಂದಾತನ ಟಿವಿಎಸ್ ಎಕ್ಸೆಲ್ ಗಾಡಿ ಜಮೀರ್ ಮನೆ ಹೊರಗೆ ಈಗಲೂ ಇದೆ.
ಇಂದು ಬೆಳಗ್ಗೆ ಶಾಸಕರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಹಾಲು ಹಾಕುವ ವ್ಯಕ್ತಿ ಸಹ ಇದ್ದರು. ಹಾಗಾಗಿ ದಾಳಿ ವೇಳೆ ಮನೆಯಲ್ಲಿದ್ದ ಕಾರಣ ಹೇಳಿ ವ್ಯಕ್ತಿಯನ್ನು ಮನೆಯಲ್ಲಿ ಕೂರಿಸಿಕೊಂಡಿದ್ದಾರೆ.
PublicNext
05/08/2021 02:25 pm