ಬೆಂಗಳೂರು: ರಾಜಭವನ ಮುತ್ತಿಗೆಗೆ ಹಾಕಲು ತೆರಳಿದ್ದ ಕಾಂಗ್ರೆಸ್ ಮುಖಂಡರನ್ನ ಪೊಲೀಸರು ತಡೆದು ತಮ್ಮ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ತಡೆಯಲು ಹೋದ ಲೇಡಿ ಕಾನ್ಸ್ ಸ್ಟೇಬಲ್ ಮೇಲೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಹಲ್ಲೆ ನಡೆಸಿದ್ದಾರೆ.
ಮೆಜೆಸ್ಟಿಕ್ʼನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಹೊರಟಂತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ರೈತರು ಫ್ರೀಡಂ ಪಾರ್ಕ್ʼನಲ್ಲಿ ಸಭೆ ನಡೆಸಿ, ಈ ಬಳಿಕ ರಾಜಭವನ ಮುತ್ತಿಗೆಗೆ ತೆರಳಿದ್ದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ್ಯ ಡಿ.ಕೆ ಶಿವಕುಮಾರ್, ವಿಪಕ್ಷ ನಾಯ ಸಿದ್ಧರಾಮಯ್ಯ, ಜಿ. ಪರಂೇಶ್ವರ್ ಸೇರಿ ಇತರೆ ಮುಖಂಡರನ್ನ ಪೊಲೀಸರು ತಮ್ಮ ವಶಕ್ಕೆ ಪಡೆಸಿದ್ದಾರೆ.
ಇನ್ನು ಇದೇ ಸಮಯದಲ್ಲಿ ಶಾಸಕಿ ಸೌಮ್ಯ ರೆಡ್ಡಿಯನ್ನ ಲೇಡಿ ಕಾನ್ಸ್ ಸ್ಟೇಬಲ್ ಒಬ್ಬರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಶಾಸಕಿ, ಪೇದೆಯ ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
PublicNext
20/01/2021 06:12 pm