ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನ್ನ ಅಂತ್ಯಕ್ರಿಯೆಗೆ ಬರಬೇಕು ಎಂದು ಡೆತ್‌ನೋಟ್ ಬರೆದಿಟ್ಟು ಎಚ್‌ಡಿಕೆ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜಿಲ್ಲೆಯ ಬೊಮ್ಮಚನಹಳ್ಳಿ ಗ್ರಾಮದ ಜಯರಾಮು ಆತ್ಮಹತ್ಯೆಗೆ ಮಾಡಿಕೊಂಡವರು. ಆಟೋ ಚಾಲಕ ಹಾಗೂ ಕಲಾವಿದರಾಗಿದ್ದ ಜಯರಾಮು ಕಳೆದ ಕೆಲವು ವರ್ಷಗಳಿಂದ ಕಾಲಿನ ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಜಯರಾಮು ಬರೆದಿಟ್ಟ ಡೆತ್‌ನೋಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಭಾನುವಾರ ಸ್ವಗ್ರಾಮ ಬೊಮ್ಮಚನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೃತನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದರು. ಮುಂದಿನ ದಿನಗಳಲ್ಲಿ ಮೃತನ ಕುಟುಂಬದ ಜೀವನಾಧಾರಕ್ಕೆ ಸಹಾಯ ಮಾಡುವ ಭರವಸೆಯನ್ನು ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
PublicNext
17/01/2021 05:27 pm