ಗದಗ: ರಾಜ್ಯದಲ್ಲಿ ಇಂದು ಗ್ರಾಪಂ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದೆ ಫಲಿತಾಂಶ ಪ್ರಕಟವಾಗುವ ಮುಂಚೆಯೇ ಗದಗದಲ್ಲಿ ಜನ ಈಗಾಗಲೇ ಬೆಟ್ಟಿಂಗ್ ಆರಂಭಿಸಿದ್ದಾರೆ.
ಗದಗಿನ ಅನೇಕ ಭಾಗಗಳಲ್ಲಿ ಚುನಾವಣಾ ಫಲಿತಾಂಶಗಳ ಮೇಲೆ ಬೆಟ್ಟಿಂಗ್ ಸಾಮಾನ್ಯವಾಗಿದೆ.
ಗ್ರಾಮಸ್ಥರು ಅವುಗಳನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡು ಅಮೂಲ್ಯ ವಸ್ತುಗಳನ್ನು ಪಣಕ್ಕಿಡುತ್ತಿದ್ದಾರೆ.
ಇದೇ ವೇಳೆ ರೋಣ ತಾಲ್ಲೂಕಿನ ಕೆಲವು ರೈತರು ತಮ್ಮ ಟ್ರಾಕ್ಟರ್ ಅನ್ನು ಬೆಟ್ಟಿಂಗ್ ನಲ್ಲಿ ಇಟ್ಟಿದ್ದಾರೆಂದು ವರದಿಯಾಗಿದೆ.
ಕಟ್ಟುನಿಟ್ಟಾದ ಪೊಲೀಸ್ ಜಾಗರೂಕತೆಯ ಹೊರತಾಗಿಯೂ ಹಿಂಬಾಗಿಲುಗಳ ಮೂಲಕ ಮತ್ತು ಮೊಬೈಲ್ ಫೋನ್ ಗಳ ಮೂಲಕ ಈ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ.
"ಈ ಬೆಟ್ಟಿಂಗ್ ರಹಸ್ಯವಾಗಿ ನಡೆಯುತ್ತಿವೆ, ಆದ್ದರಿಂದ ಇದರಲ್ಲಿ ಭಾಗಿಯಾಗಿರುವವರನ್ನು ಕಂಡುಹಿಡಿಯುವುದು ಕಷ್ಟ.
ಹೇಗಾದರೂ ಮಾಡಿ ಭಾಗಿಯಾದವನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಇಂತಹ ಯಾವುದೇ ಘಟನೆಗಳು ನಮ್ಮ ಗಮನಕ್ಕೆ ಬಂದಿಲ್ಲ, ಆದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬೆಟ್ಟಿಂಗ್ ಬಗ್ಗೆ ಪರೀಕ್ಷಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ “ಗ್ರಾಮಸ್ಥರು ಬೆಟ್ಟಿಂಗ್ ನಡೆಸುತ್ತಿರುವುದು ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಿರುವುದಾಗಿ, ಗದಗ ಎಸ್ ಪಿ ಎನ್ ಯತೀಶ್ ತಿಳಿಸಿದ್ದಾರೆ.
PublicNext
30/12/2020 09:25 am