ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ನಾವು ಇಲ್ಲಿವರೆಗೆ ಐವರನ್ನು ಕೊಂದಿದ್ದೇವೆ: ಬಿಜೆಪಿ ನಾಯಕನ ಮಾತು

ಜೈಪುರ: ನಾವು ಇಲ್ಲಿಯವರೆಗೆ ಐವರನ್ನು ಕೊಲೆ ಮಾಡಿದ್ದೇವೆ. ನೀವು ಕೂಡ ನಿಮ್ಮ ಪ್ರದೇಶದಲ್ಲಿ ಗೋಹತ್ಯೆಯಲ್ಲಿ ತೊಡಗಿರುವವರನ್ನು ಕೊಲೆ ಮಾಡಿ. ಇದಕ್ಕಾಗಿ ನಾವು ನಮ್ಮ ಕಾರ್ಯಕರ್ತರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇನೆ. ಬಂಧನ ಆದರೆ ಅವರನ್ನು ಜಾಮೀನಿನ ಮೇಲೆ ಹೊರ ತರುತ್ತೇವೆ ಅಥವಾ ಕೇಸ್‌ನಿಂದ ಖುಲಾಸೆಗೊಳಿಸುತ್ತೇವೆ ಎಂದು ರಾಜಸ್ಥಾನದ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಜ್ಞಾ‌ನ್ ದೇವ್ ಅಹುಜಾ ಹೇಳಿದ್ದಾರೆ.

ಕೊಲೆಗೆ ಪ್ರಚೋದನೆ ನೀಡುವ ಈ ಹೇಳಿಕೆ ಭಾರಿ ವೈರಲ್ ಆಗಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ‌. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಜೆಪಿ ನಾಯಕ ಅಹುಜಾ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

21/08/2022 07:39 pm

Cinque Terre

113.89 K

Cinque Terre

16