ಉತ್ತರ ಪ್ರದೇಶ : ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಾಂಬ್ ಇಟ್ಟು ಉಡಾಯಿಸುವುದಾಗಿ ಕಿಡಿಗೇಡಿಗಳು ಜೀವ ಬೆದರಿಕೆ ಹಾಕಲಾಗಿದ್ದು, ಖಾಕಿ ಪಡೆ ಹೈ ಅಲರ್ಟ್ ಆಗಿದೆ.ಯುಪಿ ಪೊಲೀಸ್ ಕಂಟ್ರೋಲ್ ರೂಮ್ 112ರ ವಾಟ್ಸಾಪ್ ಸಂಖ್ಯೆಗೆ ಈ ಬೆದರಿಕೆ ಹಾಕಲಾಗಿದ್ದು, ಬೆದರಿಕೆ ಹಾಕಲಾದ ಸಂಖ್ಯೆ ಶಾಹಿದ್ ಖಾನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.
ಬೆದರಿಕೆಯ ನಂತ್ರ ಪೊಲೀಸರು ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದ್ರಂತೆ, ಪೊಲೀಸರು, ಸೈಬರ್ ಮತ್ತು ಕಣ್ಗಾವಲು ಸೆಲ್ ತಂಡವು ಈ ಪ್ರಕರಣದ ತನಿಖೆ ನಡೆಸುತ್ತಿದೆ.ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗಾಗಿ ತಲಾಶ್ ನಡೆಸಿದ್ದಾರೆ. ಅದಕ್ಕಾಗಿ ಹಲವಾರು ಪೊಲೀಸ್ ತಂಡಗಳನ್ನ ನಿಯೋಜಿಸಲಾಗಿದೆ.
PublicNext
08/08/2022 09:05 pm