ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್ಐ ಪರೀಕ್ಷಾ ಅಕ್ರಮ: ಪ್ರಿಯಾಂಕ್ ಖರ್ಗೆಗೆ 3ನೇ ನೋಟಿಸ್ ಜಾರಿ

ಬೆಂಗಳೂರು: ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆಗೆ ಈಗಾಗಲೇ ಎರಡು ಬಾರಿ ನೋಟಿಸ್ ನೀಡಲಾಗಿದೆ. ಆದ್ರೆ ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಹಾಜರಾಗದೇ ಎರಡನೇ ನೋಟಿಸ್‌ಗೆ ಲಿಖಿತ ಉತ್ತರ ನೀಡಿದ್ದರು. ಈಗ ಆ ಪ್ರಕರಣದಲ್ಲಿ ನೀವು ಸಲ್ಲಿಸಿರುವಂತ ಉತ್ತರದಲ್ಲಿ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳಿವೆ. ಹೀಗಾಗಿ ಮತ್ತೆ ತಮ್ಮ ಬಳಿ ಪ್ರಕರಣ ಸಂಬಂಧ ಇರುವಂತ ದಾಖಲಾತಿ, ಮಾಹಿತಿ ಸಲ್ಲಿಸುವಂತೆ ಸಿಐಡಿ ನೋಟಿಸ್ ಜಾರಿಗೊಳಿಸಿದೆ.ಹೀಗಾಗಿ ವಿಚಾರಣೆಗೆ ಸ್ವತಃ ಹಾಜರಾಗುವಂತೆ ಮೂರನೇ ನೋಟಿಸ್ ನೀಡಲಾಗಿದೆ.

ಈ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆಗೆ ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವಂತ ಸಿಐಡಿಯ ಸಹಾಯಕ ತನಿಖಾಧಿಕಾರಿ ಹಾಗೂ ಪೊಲೀಸ್ ಉಪಾಧಿಕ್ಷಕ ಪಿ. ನರಸಿಂಹಮೂರ್ತಿ ಅವರು ನೋಟಿಸ್ ಜಾರಿ ಮಾಡಿದ್ದು, ಅದರಲ್ಲಿ ದಿನಾಂಕ 28-04-2022ರಂದು ಒಂದು ಉತ್ತರವನ್ನು ನೀವು ಸಲ್ಲಿಸಿದ್ದು, ಅದನ್ನು ಪರಿಶೀಲಿಸಿದಾಗ ಅದರಲ್ಲಿ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳು ಕಂಡು ಬಂದಿರುತ್ತವೆ ಎಂದಿದ್ದಾರೆ.

ಸಾರ್ವಜನಿಕ ಜಾಲತಾಣಗಳಲ್ಲಿ ಎಷ್ಟೋ ಅನಗತ್ಯ ಹಾಗೂ ನೈಜತೆಯಿಲ್ಲದ ಮಾಹಿತಿಗಳು ಹರಿದಾಡುತ್ತಿದ್ದು, ಅವುಗಳನ್ನು ತನಿಖೆಯಲ್ಲಿ ಸಾಕ್ಷ್ಯವನ್ನಾಗಿಸಿ, ಅಳವಡಿಸಿಕೊಳ್ಳಲು ಬರುವುದಿಲ್ಲ. ಆದ್ರೇ.. ತಾವು ಕಲಬುರ್ಗಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಡಿಯೋ ಕ್ಲಿಪಿಂಗ್ ಹಾಜರು ಪಡಿಸಿ, ತಮ್ಮ ಬಳಿ ಇನ್ನೂ ಸಾಕ್ಷ್ಯಾಧಾರಗಳು ಇವೆ ಎಂದು ಹೇಳಿದ್ದನ್ನು ಗಮನಿಸಲಾಗಿದೆ. ತಾವು ಅವುಗಳನ್ನು ಹಾಜರು ಪಡಿಸುವ ಮೊದಲು, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತ್ರ ಮಾಧ್ಯಮದವರ ಮುಂದೆ ಹಾಜರುಪಡಿಸಿರುತ್ತೀರಿ ಎಂದು ಭಾವಿಸಿ, ಸದರಿ ನೋಟೀಸ್ ಅನ್ನು ನೀಡಲಾಗಿತ್ತು ಎಂದಿದ್ದಾರೆ.

Edited By : Nagaraj Tulugeri
PublicNext

PublicNext

05/05/2022 10:20 am

Cinque Terre

75.3 K

Cinque Terre

5

ಸಂಬಂಧಿತ ಸುದ್ದಿ