ಬೆಂಗಳೂರು : ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪಕ್ಕೆ ಸಂಬಂಧಿಸಿದಂತೆ ಇಂದು ವಿಧಾನ ಸಭೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರು ಯಲಹಂಕದಲ್ಲಿ ನನ್ನನ್ನು ಸೋಲಿಸುವುದಕ್ಕೆ ಆಗುವುದಿಲ್ಲ ಹಾಗಾಗಿಯೇ ಇಂತಹ ಸ್ಕೆಚ್ ಹಾಕಿರಬಹುದು ಎಂದು ಹೇಳಿದ್ದಾರೆ.
ಇನ್ನು ಈ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಿ ಎಂದು ಹೇಳಿರುವ ಡಿ.ಕೆ.ಶಿವಕುಮಾರ್ ಮಾತನ್ನು ಸ್ವಾಗತಿಸುತ್ತೇನೆ ಆದರೆ ಇದೇ ಡಿಕೆಶಿ ನಾನು ರೌಡಿಗಳ ಜೊತೆಗಿದ್ದೇನೆಂದು ಹೇಳ್ತಿದ್ದಾರೆ. ಡಿಕೆಶಿ ಏನು ಸಾಧು-ಸಂತರ ಜೊತೆಯಲ್ಲಿದ್ದಾರಾ? ಅವರು ಯಾರ ಜೊತೆಗಿದ್ದಾರೆಂದು ನಾನು ಹೇಳುವುದಿಲ್ಲ ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.
ಗೋಪಾಲಕೃಷ್ಣಗಿಂತ ನಾನು ಡಿಕೆಶಿಗೆ ಒಳ್ಳೆಯ ಸ್ನೇಹಿ, ಆದರೆ ಡಿ.ಕೆ.ಶಿವಕುಮಾರ್ ಹೇಳಿರುವ ಮಾತು ತರವಲ್ಲ. ಮುಂದಿನ ದಿನಗಳಲ್ಲಿ ಸರಿಯಾಗಿ ಮಾತನಾಡಬಹುದು ಗೋಪಾಲಕೃಷ್ಣರಂತಹವರನ್ನ ಇಟ್ಟುಕೊಂಡರೆ ಒಳ್ಳೆಯದು ಕಾಂಗ್ರೆಸ್ ನಲ್ಲಿ ಇಂತಹವರು ಇದ್ದರೆ ನಮಗೇ ಒಳ್ಳೆಯದು ಎಂದರು.
ಕುಳ್ಳ ದೇವರಾಜ್ ಯಾವ ಪುಡಾಂಗ್? ಎಂದ ವಿಶ್ವನಾಥ್ ಅವನು ಯಾವ ದೊಡ್ಡ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದ್ದಾರೆ. ಅವನು ಪ್ಲೆಕ್ಸ್ ಗಳನ್ನು ಕಟ್ಟಿಕೊಂಡು ಇರುವಂತವನು. ನನ್ನ ಜೊತೆ ಕಾಂಗ್ರೆಸ್-JDS ನವರು ಫೋಟೋ ತೆಗೆಸಿಕೊಳ್ಳುತ್ತಾರೆ ಕುಳ್ಳ ದೇವರಾಜ್ ಕಾಂಗ್ರೆಸ್ ಕಾರ್ಯಕರ್ತಎಂದಿದ್ದಾರೆ.
ಇನ್ನು ಕೊಲೆಗೆ ಎಷ್ಟು ದಿನದಿಂದ ಸ್ಕೆಚ್ ಹಾಕಿದ್ದಾರೆಂದು ಗೊತ್ತಿಲ್ಲ,ಬಹುಶಃ 3 ತಿಂಗಳಿಂದ ನಡೆದಿರಬೇಕೆಂದು ಅನಿಸುತ್ತಿದೆ. ಕುಳ್ಳ ದೇವರಾಜ್ ನನಗೆ ಕ್ಷಮಾಪಣಾ ಪತ್ರ ಕಳುಹಿಸಿದ್ದಾನೆ. ನಿನ್ನೆ ಸಂಜೆ 7:30ರ ಸುಮಾರಿಗೆ ಪತ್ರ ನನ್ನ ಕೈ ಸೇರಿದೆ.
ಇನ್ನು ಇಂತದೊಂದು ನಡೆಯುತ್ತಿದೆ ಎಂದು ಸಣ್ಣ ಸುಳಿವು ಇದ್ದ ಕಾರಣ ನಾನು ಮೊದಲೇ ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆ. ಆದರೆ ವಿಡಿಯೋ ಇರಲಿಲ್ಲ, ಗೊತ್ತಾದ ಕೂಡಲೇ ಹೇಳಿದ್ದೇನೆ. ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ಅವರಿಗೆ ಹೇಳಿದ್ದೆ ಗೃಹ ಸಚಿವರಿಗೆ ಹೇಳಿದ ಕೂಡಲೇ ಪೊಲೀಸ್ ಆಯುಕ್ತರಿಗೆ ಗೃಹ ಸಚಿವರು ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.
PublicNext
01/12/2021 05:32 pm