ಬೆಂಗಳೂರು:ಎಲ್ಲರು ಎಂದಿನಂತೆ ನಿದ್ರೆಗೆ ಜಾರಿದ ಸಮಯದಲ್ಲಿ ಶಾಸಕರ ಮನೆಗೆ ಎಂಟ್ರಿ ಕೊಟ್ಟ ಕಿರಾತಕರು ಪೆಟ್ರೋಲ್ ಸುರಿದು ಶಾಸಕರ ಐಶಾರಾಮಿ ಕಾರ್ ಗಳಿಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳು ಕ್ರೌರ್ಯಕ್ಕೆ ಪಾರ್ಚೂನರ್ ಕಾರು ಸೇರಿದಂತೆ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿವೆ.
ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ಶ್ರೀನಾಥ್, ಪೊಲೀಸ್ ಜಾಯಿಂಟ್ ಕಮೀಷನರ್ ಮುರುಗನ್ ಪರಿಶೀಲನೆ ನಡೆಸಿದ್ದಾರೆ.
ದುಷ್ಕರ್ಮಿಗಳು ಶಾಸಕರ ಮನೆಯ ಹಿಂಬದಿಯ ಗೇಟಿಂದ ಒಳಗೆ ನುಗ್ಗಿದ್ದಾರೆಂದು ಆಗ್ನೇಯ ವಿಭಾಗ ಡಿಸಿಪಿ ಜೋಶಿ ಶ್ರೀನಾಥ್ ಮಹದೇವ್ ಸ್ಪಷ್ಟನೆ ನೀಡಿದ್ದಾರೆ.
ವಿಶೇಷ ತಂಡಗಳ ಮೂಲಕ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ. ತಡರಾತ್ರಿ 1.25ಕ್ಕೆ ಎಂಟ್ರಿ ಕೊಟ್ಟಿರುವ ದುಷ್ಕರ್ಮಿಗಳು, ಬಳಿಕ 1.28ಕ್ಕೆ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ.
PublicNext
12/08/2021 07:48 am