ಕಾಬೂಲ್: ತಾಲಿಬಾನಿಗಳು ತಮ್ಮ ದೇಶವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದ ನಂತರ ಅಪ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಬೇರೆ ದೇಶಕ್ಕೆ ಪಲಾಯನ ಮಾಡಿದ್ದಾರೆ. ಪಲಾಯನದ ನಂತರ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ ಅವರು ಮುಂದೆ ಆಗಬಹುದಾದ ಹಿಂಸಾಚಾರ ತಪ್ಪಿಸಲು ತಾವು ದೇಶ ತೊರೆದಿದ್ದಾಗಿ ಹೇಳಿದ್ದಾರೆ.
ಅಶ್ರಫ್ ಘನಿ ಅವರು ಅಪ್ಘಾನಿಸ್ತಾನದ ಜನರಿಗೆ ನಿಡಿದ ಸಂದೇಶ ಹೀಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ,
ನನಗೆ ಕಠಿಣ ಸವಾಲು ಎದುರಾಗಿತ್ತು. ತಾಲಿಬಾನಿಗಳನ್ನು ಎದುರಿಸಲು ನಿಂತಿದ್ದೆ. ಅವರೆಲ್ಲರೂ ಶಸ್ತ್ರಸಜ್ಜಿ ತರಾಗಿ ರಾಷ್ಟ್ರಪತಿ ಭವನ ಪ್ರವೇಶಿಸಲು ಸಿದ್ಧರಾಗಿದ್ದರು. ನಾನು ಅಫ್ಘಾನಿಸ್ತಾನದಿಂದ ದೂರ ಹೋಗಬೇಕೆಂಬುವುದು ಅವರ ಡಿಮ್ಯಾಂಡ್ ಆಗಿತ್ತು. ಕಳೆದ 20 ವರ್ಷಗಳಿಂದ ದೇಶದ ಜನರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದು ವೇಳೆ ಅವರ ಡಿಮ್ಯಾಂಡ್ ಒಪ್ಪದಿದ್ರೆ ಯುದ್ಧವೇ ನಡೆಯತ್ತಿತ್ತು. ಈ ಯುದ್ಧದಲ್ಲಿ ನೂರಾರು ಜನ ಪೊಲೀಸರು ಹುತಾತ್ಮರಾಗುತ್ತಿದ್ದರು. ರಕ್ತ ಹರಿಸೋದು ನನಗೆ ಇಷ್ಟವಿರಲಿಲ್ಲ. ಅವರ ಬೇಡಿಕೆಯಂತೆ ಆಧಿಕಾರ ಹಸ್ತಾಂತರಿಸಿ ದೇಶ ತೊರೆದೆ. ಇಲ್ಲವಾದಲ್ಲಿ 60 ಲಕ್ಷ ಜನಸಂಖ್ಯೆಯುಳ್ಳ ಈ ನಗರ ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತಿತ್ತು.
ತಮ್ಮ ರಸ್ತೆಗೆ ಅಡ್ಡಲಾಗಿರುವ ನನ್ನನ್ನು ತೆಗೆದುಹಾಕಲು ತಾಲಿಬಾಲಿನಿಗಳು ನಿರ್ಧರಿಸಿದ್ದರು. ಇದಕ್ಕಾಗಿ ಕಾಬೂಲ್ ಮತ್ತು ಕಾಬೂಲ್ ಜನತೆಯ ಮೇಲೆ ದಾಳಿಯ ಕುರಿತು ಪ್ಲಾನ್ ಮಾಡಿಕೊಂಡಿದ್ದರು. ಹಾಗಾಗಿ ಇದೆಲ್ಲವನ್ನು ತಡೆಯಲು ನನ್ನ ಮುಂದಿದ ದಾರಿ ಇದು ಒಂದೇ ಆಗಿತ್ತು. ಬಂದೂಕು, ಬಾಂಬ್ ಗಳಿಂದ ತಾಲಿಬಾನಿಗಳು ಯುದ್ಧ ಗೆದ್ದಿರಬಹುದು. ಈಗ ದೇಶ ಮತ್ತು ಅಲ್ಲಿಯ ಜನತೆಯ ಮಾನ ಹಾಗೂ ಪ್ರಾಣವನ್ನು ರಕ್ಷಿಸುವ ಜವಾಬ್ದಾರಿ ಅವರ ಮೇಲಿದೆ.
ಹಲವು ಜನ ಆತಂಕದಲ್ಲಿದ್ದು, ಮನೆಯಿಂದ ಹೊರ ಬರಲಾರದ ಸ್ಥಿತಿಯಲ್ಲಿದ್ದಾರೆ. ದೇಶದ ಜನತೆಗೆ ತಾಲಿಬಾನಿಗಳ ನಂಬಿಕೆ ಇಲ್ಲ. ದೇಶದ ಮಹಿಳೆ, ಮಕ್ಕಳು, ಪುರುಷರು, ವೃದ್ಧರು ಸೇರಿದಂತೆ ಎಲ್ಲ ರನ್ನೂ ಒಗ್ಗೂಡಿಸಿಕೊಂಡು ತಾಲಿಬಾನಿಗಳು ಮುಂದೆ ಹೆಜ್ಜೆ ಇರಿಸಬೇಕಿದೆ. ನಾನು ನಿಮ್ಮ ಸೇವೆಯಲ್ಲಿರುತ್ತೇನೆ. ಅಫ್ಘಾನಿಸ್ತಾನ ಜಿಂದಾಬಾದ್ ಎಂದು ಅಶ್ರಫ್ ಘನಿ ಸಂದೇಶ ನೀಡಿದ್ದಾರೆ.
ಸದ್ಯ ಇಡೀ ಅಪ್ಘಾನಿಸ್ತಾನದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಜನರ ಜೀವಕ್ಕೆ ಏನೇನೂ ಖಾತ್ರಿ ಇಲ್ಲದಂತಾಗಿದೆ. ಸಾಧ್ಯವಾದಷ್ಟು ಜನ ದೇಶ ತೊರೆಯುತ್ತಿದ್ದಾರೆ.
PublicNext
16/08/2021 01:38 pm