ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: 'ನಮ್ಮ ದೇಶ ಬಿಟ್ಟು ತೊಲಗು': ಭಾರತ ಮೂಲದ ಅಮೆರಿಕ ಸಂಸದೆಗೆ ಧಮ್ಕಿ

ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ನಾಗರಿಕರ ಮೇಲಿನ ದಾಳಿಗಳು ಮುಂದುವರೆದಿವೆ‌. ಇತ್ತೀಚೆಗಷ್ಟೇ ಅಮೆರಿಕನ್ ಮಹಿಳೆಯೊಬ್ಬಳು ಭಾರತ ಮಹಿಳೆಯರನ್ನು‌ ಅಶ್ಲೀಲವಾಗಿ ನಿಂದಿಸಿ ಹಲ್ಲೆ ಮಾಡಿದ್ದಳು. ನಂತರ ಆಕೆಯನ್ನು ಅಲ್ಲಿನ‌ ಪೊಲೀಸರು ಬಂಧಿಸಿದ್ದರು.

ಈ ಘಟನೆ ಮಾಸುವ ಮುನ್ನವೇ ಭಾರತೀಯ ಮೂಲದ ಅಮೆರಿಕ ಸಂಸದೆಗೆ ದುಷ್ಕರ್ಮಿಯೊಬ್ಬ ಧಮ್ಕಿ ಹಾಕಿದ್ದಾನೆ‌. ಸಂಸದೆ ಪ್ರಮೀಳಾ ಜಯಪಾಲ್ ಅವರಿಗೆ ಆಡಿಯೋ ಸಂದೇಶ ಕಳುಹಿಸಿರುವ ಅಮೆರಿಕದ‌ ವ್ಯಕ್ತಿಯೊಬ್ಬ ಅಶ್ಲೀಲವಾಗಿ ನಿಂದಿಸಿದ್ದಾನೆ. 'ಸುಮ್ಮನೇ ನಿಮ್ಮ ದೇಶಕ್ಕೆ ವಾಪಾಸ್ ಹೋಗಿ. ಇಲ್ಲದಿದ್ರೆ ಸರಿ ಇರೋದಿಲ್ಲ.

ಈ ಎಲ್ಲ ಆಡಿಯೋ ಕ್ಲಿಪ್‌ಗಳನ್ನು ಟ್ವೀಟ್ ಮಾಡಿರುವ ಪ್ರಮೀಳಾ ಜಯಪಾಲ್, ಸಾಮಾನ್ಯವಾಗಿ ರಾಜಕಾರಣಿಗಳು ತಮ್ಮ ದೌರ್ಬಲ್ಯವನ್ನು ವ್ಯಕ್ತಪಡಿಸೋದಿಲ್ಲ. ಆದರೆ ಹಿಂಸೆ, ವರ್ಣಬೇಧ, ಲಿಂಗಬೇಧ ನೀತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

10/09/2022 03:57 pm

Cinque Terre

78.13 K

Cinque Terre

2

ಸಂಬಂಧಿತ ಸುದ್ದಿ