ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಲಂಕಾ ಜೈಲಿಗೆ‌ ಅಣ್ಣಾಮಲೈ ಭೇಟಿ: ಬಂಧಿತ ಭಾರತೀಯ ಮೀನುಗಾರರೊಂದಿಗೆ ಮಾತುಕತೆ

ಜಾಫ್ನಾ: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಶ್ರೀಲಂಕಾದ ಜಾಫ್ನಾ ನಗರದ ಕಾರಗೃಹಕ್ಕೆ ತೆರಳಿ ಬಂಧಿತರಾಗಿರುವ 12 ಜನ ಭಾರತೀಯ ಮೀನುಗಾರರನ್ನು ಭೇಟಿಯಾಗಿದ್ದಾರೆ.

ಇದೇ ಬಟ್ಟೆ ಹಾಗೂ ಅವಶ್ಯಕ ವಸ್ತುಗಳನ್ನು ನೀಡಿರುವ ಅಣ್ಣಾಮಲೈ ಮೀನುಗಾರರ ಕ್ಷೇಮ ವಿಚಾಸಿದ್ದಾರೆ‌. ಬಂಧಿತ ಮೀನುಗಾರರು ತಮಿಳುನಾಡಿನ ರಾಮೇಶ್ವರಂ ಮೂಲದವರಾಗಿದ್ದಾರೆ. ಇವರೆಲ್ಲರ ಬಿಡುಗಡೆ ಭಾರತ ಸರ್ಕಾರ ವಿದೇಶಾಂಗ ಸಚಿವಾಲಯ ನಿರಂತರ ಪ್ರಯತ್ನ ನಡೆಸಿದೆ. ಸದ್ಯದರಲ್ಲೇ ಎಲ್ಲ ಮೀನಿಗಾರರು ಬಿಡುಗಡೆ ಹೊಂದಲಿದ್ದಾರೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

ಶ್ರೀಲಂಕಾ ಜಲಗಡಿ ಪ್ರವೇಶಿಸಿದರೆಂಬ ಕಾರಣಕ್ಕೆ ಶ್ರೀಲಂಕಾ ನೌಕಾಪಡೆಯು 12 ಜನ ಮೀನುಗಾರರನ್ನು ಕಳೆದ ಮಾರ್ಚ್ 23ರಂದು ಬಂಧಿಸಿತ್ತು.

Edited By : Nagaraj Tulugeri
PublicNext

PublicNext

02/05/2022 07:42 pm

Cinque Terre

63.71 K

Cinque Terre

3

ಸಂಬಂಧಿತ ಸುದ್ದಿ