ಪಣಜಿ: ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಅವರ ಸಾವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. 2019ರಲ್ಲಿ ಹರಿಯಾಣ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೋನಾಲಿ ತನ್ನ 42ರ ವಯಸ್ಸಿನಲ್ಲಿ ಮಂಗಳವಾರ ಸಾವನ್ನಪ್ಪಿದ್ದಾರೆ.
ಇದೀಗ ಸೋನಾಲಿ ಅವರ ಸಹೋದರ ಆಕೆಯನ್ನು ಇಬ್ಬರು ಸಹಚರರೇ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.ಈ ಬಗ್ಗೆ ಗೋವಾ ಪೊಲೀಸರಿಗೆ ಲಿಖಿತ ದೂರು ನೀಡಿರುವ ಸೋನಾಲಿ ಸಹೋದರ ರಿಂಕು ಢಾಕಾ, ಇದು ಪೂರ್ವ ಯೋಜಿತ ಕೊಲೆ. ಸೋನಾಲಿಯ ಆಪ್ತ ಸಹಾಯಕ ಸೇರಿದಂತೆ ನನಗೆ ಇಬ್ಬರ ಮೇಲೆ ಅನುಮಾನವಿದೆ. ಆಕೆಯ ಸಾವಿನ ಬಗ್ಗೆ ಸಿಬಿಐ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಪಣಜಿ ಪೊಲೀಸರು ಸೋನಾಲಿ ಪಿಎ ಸುಧೀರ್ ಸಾಂಗ್ ವಾನ್ ನನ್ನು ಬಂಧಿಸಿದ್ದಾರೆ.
ಸೋನಾಲಿ ಸಾವಿಗೂ ಮುನ್ನ, ಆಕೆಯನ್ನು ಅತ್ಯಾಚಾರ ಮಾಡಿ ಬ್ಲ್ಯಾಕ್ಮೇಲ್ ಮಾಡಲಾಗಿದೆ ಎಂದು ರಿಂಕು ಢಾಕಾ ಆರೋಪಿಸಿದ್ದಾರೆ. ಆಕೆಯ ಆಪ್ತ ಸಹಾಯಕ ಸುಧೀರ್ ಸಂಗ್ವಾನ್ ಹಾಗೂ ಆತನ ಸ್ನೇಹಿತ ಸುಖ್ವಿಂದರ್ ಆಕೆಗೆ ಆಹಾರದಲ್ಲಿ ಅಮಲು ಪದಾರ್ಥ ನೀಡಿ, ಅತ್ಯಾಚಾರವೆಸಗಿದ್ದಾರೆ. ಮಾತ್ರವಲ್ಲದೇ ಅದರ ವೀಡಿಯೋವನ್ನೂ ಮಾಡಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಆಕೆಯ ಆಸ್ತಿ ಕಬಳಿಸಿ ಹತ್ಯೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಆರೋಪಿಸಿದ್ದಾರೆ.
PublicNext
24/08/2022 08:58 pm