ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಸ್‌ವೈ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ: ₹750 ಕೋಟಿ ಅಘೋಷಿತ ಆಸ್ತಿ ಪತ್ತೆ

ಬೆಂಗಳೂರು: ಕೆಲ ದಿನಗಳ ಹಿಂದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಆಪ್ತ ಆತನೂರು ಉಮೇಶ್ ಅವರ ಮನೆ ಹಾಗೂ ಇತರ ಗುತ್ತಿಗೆದಾರರ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ ಐಟಿ ಅಧಿಕಾರಿಗಳು ಒಟ್ಟು ₹750ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆ ಮಾಡಿದ್ದಾರೆ. ಆಯನೂರು ಉಮೇಶ್ ಅವರು ವೃತ್ತಿಯಲ್ಲಿ ಬಿಎಂಟಿಸಿ ಚಾಲಕರಾಗಿದ್ದಾರೆ.

ಐಟಿ ಆದಿಕಾರಿಗಳ ಈ ಶೋಧ ಕಾರ್ಯಾಚರಣೆ ಸತತ ಮೂರು ದಿನಗಳ ಕಾಲ ನಾಲ್ಕು ರಾಜ್ಯಗಳ 47 ಸ್ಥಳಗಳಲ್ಲಿ ನಡೆದಿತ್ತು. ಉಮೇಶ್ ಸೇರಿದಂತೆ ಯಡಿಯೂರಪ್ಪ ಅವರ ಮಗ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಹಪಾಠಿ ಅರವಿಂದ್‌ ರಾಮಸ್ವಾಮಿ ಸೇರಿದಂತೆ ಹಲವರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಇವರೆಲ್ಲ ಜಲಸಂಪನ್ಮೂಲ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳಲ್ಲಿನ ಬೃಹತ್ ಕಾಮಗಾರಿಗಳ ಗುತ್ತಿಗೆ ಪಡೆದಿದ್ದರು ಎನ್ನಲಾಗಿದೆ. ಗುತ್ತಿಗೆದಾರರಾದ ಡಿ.ವೈ. ಉಪ್ಪಾರ, ಸ್ಟಾರ್‌ ಚಂದ್ರು, ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್‌, ಅಮೃತ್‌ ಕನ್‌ಸ್ಟ್ರಕ್ಷನ್ಸ್‌ನ ಎಂ.ಸಿ. ರಾವ್‌, ಶ್ರೀನಿವಾಸ್‌, ಬಸವೇಶ್ವರ ನಗರದ ಸೋಮಶೇಖರ್, ಕಬ್ಬಿಣ ಮತ್ತು ಸಿಮೆಂಟ್‌ ಪೂರೈಸುವ ಸಹಕಾರ ನಗರದ ರಾಹುಲ್‌ ಎಂಟರ್‌ಪ್ರೈಸಸ್‌ ಸೇರಿದಂತೆ ಹಲವರ ಮೇಲೆ ಗುರುವಾರ ಐ.ಟಿ ಅಧಿಕಾರಿಗಳು ದಾಳಿ ಮಾಡಿದ್ದರು.

ದಾಖಲೆ ಪರಿಶೀಲನೆ ವೇಳೆ ಮೂವರು ಗುತ್ತಿಗೆದಾರರ ಬಳಿ ಅಘೋಷಿತ ₹750ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದರಲ್ಲಿ 487ಕೋಟಿಯಷ್ಟು ಅಘೋಷಿತ ಆದಾಯವನ್ನೂ ಹೊಂದಿರೋದಾಗಿ ಕನ್ಸ್ಟ್ರಕ್ಷನ್ ಕಂಪನಿಗಳು ಒಪ್ಪಕೊಂಡಿವೆ. ಇನ್ನು ದಾಳಿಯ ವೇಳೆ ಲೆಕ್ಕಪತ್ರಗಳಿಲ್ಲದ ₹4.69 ಕೋಟಿ ನಗದು, ₹8.67 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹ 29.83 ಕೋಟಿ ಮೌಲ್ಯದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಾಹಿತಿ ನೀಡಿದೆ.

Edited By : Nagaraj Tulugeri
PublicNext

PublicNext

13/10/2021 09:11 am

Cinque Terre

96.42 K

Cinque Terre

20

ಸಂಬಂಧಿತ ಸುದ್ದಿ