ಶಿವಮೊಗ್ಗ: ಚುನಾವಣಾಧಿಕಾರಿ ದಿಢೀರ್ ದಾಳಿ ನಡೆಸಿ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿದ ಚುನಾವಣಾಧಿಕಾರಿಗಳು ನೂರಕ್ಕೂ ಹೆಚ್ಚು ಕುಕ್ಕರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ತಾಲೂಕು ನಿದಿಗೆ ಗ್ರಾಮದ ತೋಟದ ಮನೆಯಲ್ಲಿ ಕುಕ್ಕರ್ ಗಳು ಪತ್ತೆಯಾಗಿವೆ. ಮೂರು ಲೀಟರ್ ಸಾಮರ್ಥ್ಯದ ಕುಕ್ಕರ್ ಗಳನ್ನು ಮತದಾರರಿಗೆ ಹಂಚಲು ತರಿಸಲಾಗಿತ್ತು ಎನ್ನಲಾಗಿದೆ. ಇದಕ್ಕೆ ಸಾಕ್ಷ್ಯವಾಗಿ ಅಭ್ಯರ್ಥಿ ಧರಣೇಂದ್ರ(ಧಣಿ) ಎಂಬವರ ಭಾವಚಿತ್ರವಿರುವ ಸ್ಟಿಕ್ಕರ್ ಗಳು ಕೂಡ ಪತ್ತೆಯಾಗಿವೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚುನಾವಣಾಧಿಕಾರಿಗಳಾದ ಚಂದ್ರಪ್ಪ, ಕಲ್ಲಣ್ಣ ದಾಳಿಯಲ್ಲಿದ್ದರು.
PublicNext
21/12/2020 10:27 pm