ಹಾಸನ: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಕಾರು ಮುಂದೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಬೇಲೂರು ಪಟ್ಟಣದ ಹನುಮಂತನಗರದ ಬಳಿ ನಿನ್ನೆ ನಡೆದಿದೆ.
ಹನುಮಂತನಗರದ ನಿವಾಸಿ ಹೂವಮ್ಮ (58) ಮೃತ ಮಹಿಳೆ. ಇವರ ಪುತ್ರ ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ದುರ್ಘಟನೆ ವೇಳೆ ಕಾರಿನಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಪ್ರಯಾಣಿಸುತ್ತಿರಲಿಲ್ಲ ಎನ್ನಲಾಗಿದೆ.
ಬೈಕ್ ಸವಾರ ಅನಿರೀಕ್ಷಿತವಾಗಿ ಪಕ್ಕಕ್ಕೆ ಬಂದಿದ್ದರಿಂದ ಅಪಘಾತ ಸಂಭವಿಸಿತು ಎಂದು ಚಾಲಕ ಪ್ರವೀಣ್ ಹೇಳಿದ್ದಾನೆ. ಚಾಲಕ ಪ್ರವೀಣ್ ನಿರ್ಲಕ್ಷ್ಯ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ. ಘಟನೆ ವೇಳೆ ಚಾಲಕ ಮದ್ಯಪಾನ ಮಾಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.
PublicNext
04/10/2021 12:19 pm