ಜಮ್ಮು-ಕಾಶ್ಮೀರ್: ದಿ ಕಾಶ್ಮೀರ್ ಫೈಲ್ಸ್ ಚಿತ್ರ ಭಾರೀ ಪರಿಣಾಮ ಬೀರಿದೆ. ಇದರಿಂದ ಕಾಶ್ಮೀರ್ ನಲ್ಲಿ ಮತ್ತೆ ಅಶಾಂತ ತಲೆದೋರಿದೆ ಎಂದು ಜಮ್ಮು-ಕಾಶ್ಮೀರ್ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿಕೆ ಕೊಟ್ಟಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಚಿತ್ರ ಜನರಲ್ಲಿ ದ್ವೇಷ ಭಾವನೆ ಹುಟ್ಟು ಹಾಕಿದೆ. ಇಂತಹ ಚಿತ್ರಗಳನ್ನ ನಿಷೇಧಿಸಬೇಕು ಎಂದು ಫಾರೂಕ್ ಅಬ್ದುಲ್ಲಾ ಆಗ್ರಹಿಸಿದ್ದಾರೆ.
ಇಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನ ಪ್ರಸ್ತಾಪಿಸಲು ಈಗಾಗಲೇ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನ ಭೇಟಿ ಮಾಡಿದ್ದೇ ಅಂತಲೂ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
PublicNext
17/05/2022 07:19 am