ಬೆಂಗಳೂರು: ಮೋಹಕ ತಾರೆ ರಮ್ಯಾ ಮತ್ತೆ ಚಿತ್ರರಂಗದಲ್ಲಿ ಮಿಂಚಲು ಅಣಿಯಾಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ರೋಮಾಂಚಕ ಸುದ್ದಿ ಕೊಟ್ಟಿರುವ ರಮ್ಯಾ ಮತ್ತೆ ಕ್ಯಾಮೆರಾ ಮುಂದೆ ಬರುವ ಸುಳಿವನ್ನು ಪರೋಕ್ಷವಾಗಿ ನೀಡಿದ್ದಾರೆ.
'ಒಟ್ಟಿಗೆ ನಟಿಸೋಣ ರಕ್ಷಿತ್' ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ರಮ್ಯಾ ಅಭಿಮಾನಿಗಳ ಪುಳಕಕ್ಕೆ ಕಾರಣವಾಗಿದ್ದಾರೆ. ಸದ್ಯ ಅವರ ಸುತ್ತವೇ ರಾಜಕೀಯವಾಗಿ ಶೀತಲ ವಿಪ್ಲವ ನಡೆಯುತ್ತಿದೆ. ಇದೇ ಹೊತ್ತಿನಲ್ಲೇ ರಮ್ಯಾ ಈ ಮಾತು ಹೇಳಿದ್ದು ಅವರ ಮುಂದಿನ ನಡೆ ಏನಿರಬಹುದು ಎಂಬ ಬಗ್ಗೆ ಕುತೂಹಲ ಮೂಡಿಸಿದೆ.
PublicNext
12/05/2022 06:31 pm