ಉತ್ತರ ಪ್ರದೇಶ: ಬಾಲಿವುಡ್‌ನ ನಾಯಕಿ ನಟಿ ಕಂಗನಾ ರಾಣಾವುತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೊನ್ನೆ ಸಂಸ್ಕೃತ ಭಾಷೆ ರಾಷ್ಟ್ರ ಭಾಷೆ ಆಗಬೇಕು ಅಂತ ಹೇಳಿಕೊಟ್ಟು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಆದರೆ, ಕಂಗನಾ, ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನ ಭೇಟಿಯಾಗಿ ಭಾರಿ ಕುತೂಹಲಕ್ಕೂ ಗ್ರಾಸವಾಗುತ್ತಿದ್ದಾರೆ.
ಕಂಗನಾ ಮುಂದೊಂದಿನ ಬಿಜೆಪಿ ಸೇರಿದ್ರೂ ಆಶ್ಚರ್ಯ ಪಡಬೇಕಿಲ್ಲ ಅನಿಸುತ್ತದೆ. ಆಗಾಗ ಬಿಜೆಪಿ ಪರವೇ ಮಾತನಾಡೋ ಕಂಗನಾ, ಯೋಗಿ ಆದಿತ್ಯನಾಥ್ ರನ್ನ ಮೀಟ್ ಆಗಿದ್ದಾರೆ. ಹೂ ಗುಚ್ಚಕೊಟ್ಟು ಫೋಟೋವನ್ನು ತೆಗೆಸಿಕೊಂಡಿದ್ದಾರೆ.
ಸಿಎಂ ಯೋಗಿ ಕೂಡ ಕಂಗನಾರನ್ನ ಹಾಗೇ ಕಳಿಸಿಕೊಟ್ಟಿಲ್ಲ. ಬದಲಾಗಿ ನೆನಪಿನ ಕಾಣಿಕೆಯನ್ನ ಕೊಟ್ಟಿದ್ದಾರೆ. ಇವರ ಈ ಕ್ಷಣದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಭೇಟಿಯ ಕಾರಣ ಏನೂ ಅನ್ನೋದು ತಿಳಿದು ಬಂದಿಲ್ಲ. ಹಾಗಾಗಿಯೇ ಈ ಭೇಟಿ ಮತ್ತಷ್ಟು ಕುತೂಹಲ ಕೆರಳಿಸಿದೆ.
PublicNext
02/05/2022 10:07 am