ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಚಿತ್ರ ಸಂಚಲನ ಮೂಡಿಸಿದೆ. ರಾಜಕೀಯ ಪಕ್ಷಗಳಲ್ಲೂ ಈ ಚಿತ್ರದ ಬಗ್ಗೆ ಪರ ವಿರೋಧ ನಿಲುವುಗಳು ಇವೆ. ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಚಿತ್ರ ವೀಕ್ಷಿಸಲು ಎಲ್ಲರಿಗೂ ಆಹ್ವಾನಿಸಿದ್ದಾರೆ.
ಚಿತ್ರ ವೀಕ್ಷಿಸಲು ಮಂತ್ರಿಮಾಲ್ ಗೆ ಬಿಜೆಪಿ ಶಾಸಕರು ಮತ್ತು ಸಚಿವರು ಚಿತ್ರ ವೀಕ್ಷಿಸಲು ಎರಡು ಬಸ್ ನಲ್ಲಿ ಬಂದಿದ್ದಾರೆ. ಭಾರತ್ ಮಾತಾ ಕೀ ಜೈ ಅಂತಲೇ ಘೋಷಣೆ ಕೂಗಿ ಚಿತ್ರ ವೀಕ್ಷಿಸಲು ಮುಂದಾಗಿದ್ದಾರೆ.
ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ನೇತೃತ್ವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ,ಶಿವರಾಂ ಹೆಬ್ಬಾರ್ ಸೇರಿದಂತೆ 50 ಕ್ಕೂ ಹೆಚ್ಚು ಶಾಸಕರು ಇಲ್ಲಿಗೆ ಬಂದಿದ್ದಾರೆ. ಮಂತ್ರಿ ಮಾಲ್ ನಲ್ಲೂ ಈ ಕಾರಣಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಹಾಕಲಾಗಿದೆ.
PublicNext
15/03/2022 07:18 pm