ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಬಂಧನದಲ್ಲಿದ್ದು, ಇದುವರೆಗೂ ಜಾಮೀನು ಸಿಕ್ಕಿಲ್ಲ. ಒಂದು ವೇಳೆ ಶಾರುಖ್ ಖಾನ್ ಬಿಜೆಪಿಗೆ ಸೇರ್ಪಡೆಯಾದರೆ, ಅದೇ ಡ್ರಗ್ಸ್ ಸಕ್ಕರೆ ಪೌಡರ್ ಆಗಿ ಮಾರ್ಪಡುತ್ತದೆ ಎಂದು ಮಹಾರಾಷ್ಟ್ರ ಎನ್ಸಿಪಿ ಸಚಿವ ಚಗನ್ ಭುಜಬಲ್ ವ್ಯಂಗ್ಯವಾಡಿದ್ದಾರೆ.
ಡ್ರಗ್ ಕೇಸ್ನಲ್ಲಿ ಕಿಂಗ್ ಖಾನ್ ಪುತ್ರ ಆರ್ಯನ್ನ್ನ ಎನ್ಸಿಬಿ ಬಂಧಿಸಿ ತನಿಖೆ ನಡೆಸುತ್ತಿದೆ. ಆದರೆ ಒಂದು ವೇಳೆ ಶಾರುಖ್ ಖಾನ್ ಬಿಜೆಪಿ ಸೇರ್ಪಡೆಯಾಗಿದ್ದರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತಿತ್ತು ಅಂತ ಲೇವಡಿ ಮಾಡಿದ್ದಾರೆ. ಅಲ್ಲದೆ ಗುಜರಾತ್ನ ಮುಂದ್ರಾ ಬಂದರಿನಲ್ಲಿ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಆದ್ರೆ ಆ ಪ್ರಕರಣದ ತನಿಖೆ ಬಿಟ್ಟು ಶಾರುಖ್ ಪುತ್ರನ ಹಿಂದೆ ಎನ್ಸಿಬಿ ಬಿದ್ದಿದೆ ಎಂದು ಆರೋಪಿಸಿದ್ದಾರೆ.
PublicNext
24/10/2021 11:05 am