ಬೆಂಗಳೂರು: ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅಲ್ಲಿನ ಪದಾಧಿಕಾರಿಗಳೊಂದಿಗೆ ಪೈರಸಿ ಕುರಿತು ಚರ್ಚೆ ನಡೆಸಿದ್ದಾರೆ. ನಂತರ ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಪೈರಸಿ ತಡೆಗಾಗಿ ಸೈಬರ್ ಕ್ರೈಂ ಅಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ.
ನಮಗೆ ಪರದೆ ಹಿಂದಿನ ಪರಿಶ್ರಮ ಕಾಣಲ್ಲ. ಕೆಲ ಚಿತ್ರಗಳಲ್ಲಿ ದುರಂತವಾದಾಗ ಸರ್ಕಾರ ಕರೆದು ಮಾತುಕತೆ ಮಾಡಿದೆ. ಮುಂಜಾಗೃತ ಕ್ರಮಕೈಗೊಂಡು ಶೂಟಿಂಗ್ ಮಾಡಬೇಕು. ಪೊಲೀಸರಿಂದ ತೊಂದರೆ ಮತ್ತು ಕಿರುಕುಳ ಆಗದಂತ ಕ್ರಮಕೈಗೊಳ್ಳುತ್ತೇನೆ. ಪೈರಸಿ ತಡೆಯಲು ಕ್ರಮ ಕೈಗೊಳ್ಳುತ್ತೆವೆ. ಚಿತ್ರೋದ್ಯಮ ಸಾವಿರಾರು ಜನಕ್ಕೆ ಅನ್ನ ಹಾಕುತ್ತಿದೆ. ಸಿನೆಮಾ ಇಂಡಸ್ಟ್ರಿಗೆ ಅನೇಕ ಕಾಯಿಲೆ ತಂದಿದ್ದೆವೆ. ಆದರೆ ಇನ್ಮುಂದೆ ಈ ರೀತಿ ಆಗಲ್ಲ. ನಾನು ಕೂಡ ಡಾ. ರಾಜ್‌ಕುಮಾರ್ ಅಭಿಮಾನಿ. ಕನ್ನಡದ ಎಲ್ಲ ಪ್ರತಿಭೆಗಳು ಬೆಳೆಯಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇನ್ನು ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಸಾ.ರಾ ಗೋವಿಂದ್, ಉಮೇಶ್ ಬಣಕಾರ್, ಚಿನ್ನೇಗೌಡ ಪಾಲ್ಗೊಂಡಿದ್ದರು.
PublicNext
19/10/2021 03:11 pm