ಬೆಂಗಳೂರು: ಹಿಜಾಬ್ ವಿವಾದ ತಾರಕಕ್ಕೇರಿ ಈಗ ಹೈಕೋರ್ಟ್ ಆವರಣಕ್ಕೆ ಬಂದು ತಲುಪಿದೆ. ಈ ಕೇಸ್‌ನ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್‌ನಲ್ಲಿ ವಿಚಾರಣೆಗಾಗಿ ತ್ರಿಸದಸ್ಯ ಪೀಠ ರಚನೆಯಾಗಿದೆ. ಇನ್ನು ಈ ವಿವಾದ ಬಗ್ಗೆ ನಟಿ ಸಂಜನಾ ಗಲ್ರಾನಿ ಇದೇ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಅವರು ತಮ್ಮ ಪೋಸ್ಟ್ ಮೂಲಕ ಬಟ್ಟೆ ಧರಿಸುವುದು ಹೆಣ್ಣು ಮಕ್ಕಳ ಆಯ್ಕೆ ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ. ಪೆರಿಯಾರ್ ಅವರ ಪ್ರಸಿದ್ಧ ಸಂದೇಶ ಹೀಗಿದೆ. "ಮಹಿಳೆಯರು ಯಾವ ಬಟ್ಟೆ ಧರಿಸಬೇಕು ಎಂದು ಅವರೇ ನಿರ್ಧಾರ ಮಾಡಲಿ. ಅವರ ಅಲ್ಮೆರಾದಲ್ಲಿ ನಿಮಗೇನು ಕೆಲಸ..?". ಈ ಮಾತನ್ನು ಚಿಂತಕ ಪೆರಿಯಾರ್ ಹೇಳಿದ್ದಾರೆ. ಅದೇ ಮಾತನ್ನು ಸಂಜನಾ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
PublicNext
09/02/2022 11:03 pm