ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್‌ ಮನೆಗೆ ನುಗ್ಗಿದ ಮಳೆ ನೀರು

ಬೆಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಲವು ಕೆರೆ ಕಟ್ಟೆಗಳು ತುಂಬಿವೆ. ಸಾವಿರಾರು ಮನೆಗಳು ಮಳೆಯ ರಭಸಕ್ಕೆ ಹಾನಿಗೀಡಾಗಿವೆ. ತಗ್ಗುಪ್ರದೇಶಗಳಲ್ಲಿರುವ ಮನೆಗೆ ಮಳೆ ನೀರು ನುಗ್ಗಿದೆ. ಈಗ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್‌ ಅವರ ಮನೆಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ.. ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆಕಟ್ಟಿ ನೀರು ಹರಿಯುವ ಹೊಂಡಗಳ ಮುಚ್ಚಿದ್ದಾರೆ. ಮಾಯಸಂದ್ರ ತಳದಲ್ಲಿ ಇರುವ ಸುಮಾರು 20ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ ದಯಮಾಡಿ ನೀರಾವರಿನಿಗಮ ಗಮನ ಹರಿಸಿ ವಿನಂತಿ ಎಂದು ತಿಳಿಸಿದ್ದಾರೆ.

ಹೌದು, ಜಗ್ಗೇಶ್ ಅವರ ಮೂಲ ಊರು ತುಮಕೂರು ಜಿಲ್ಲೆಯಲ್ಲಿದೆ. ಈಗ ಮಳೆ ನೀರು ನುಗ್ಗಿರುವುದು ಕೂಡ ಹುಟ್ಟೂರು ಮಾಯಸಂದ್ರದಲ್ಲಿರುವ ಅವರ ಮನೆಗೆ. ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜಗ್ಗೇಶ್ ಕಳೆದ ಜುಲೈನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಶೇಷವೆಂದರೆ ರಾಜ್ಯಸಭೆಯಲ್ಲಿ ಕನ್ನಡದಲ್ಲಿ ಜಗ್ಗೇಶ್ ಪ್ರಮಾಣ ವಚನ ಸ್ವೀಕರಿಸಿದರು.

Edited By : Vijay Kumar
PublicNext

PublicNext

28/08/2022 04:32 pm

Cinque Terre

63.68 K

Cinque Terre

3