ಮೈಸೂರು: ಮೈಸೂರಿನ ಶಕ್ತಿಧಾಮವೆಂದರೆ ಅಪ್ಪುಗೆ ಅಚ್ಚುಮೆಚ್ಚು. ಅಲ್ಲಿರುವ ಮಕ್ಕಳಿಗೆ ಶಾಲೆ ಕಟ್ಟಿಸಬೇಕು ಎಂಬುವುದು ಅವರ ಮಹದಾಸೆಯಾಗಿತ್ತು. ಸದ್ಯ ಈ ಕನಸ್ಸಿಗೆ ಸಿಎಂ ಚಾಲನೆ ನೀಡಿದ್ದಾರೆ. ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರ ‘ಶಕ್ತಿಧಾಮ’ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ‘ಶಕ್ತಿಧಾಮ ವಿದ್ಯಾಶಾಲಾ’ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಶಕ್ತಿಧಾಮದ ಹೆಣ್ಣು ಮಕ್ಕಳಿಗಾಗಿ ವಿದ್ಯಾಶಾಲೆ ಆರಂಭಿಸಬೇಕೆಂಬುದು ನಟ ಪುನೀತ್ ರಾಜ್ಕುಮಾರ್ ಅವರ ಕನಸಾಗಿತ್ತು. ಅದೀಗ ಆ ಕನಸು ನೆರವೇರಿದೆ.
ಶಕ್ತಿಧಾಮದಲ್ಲಿ 1ರಿಂದ 8ನೇ ತರಗತಿ ಆರಂಭಿಸಲು ಸರ್ಕಾರದಿಂದ ಅನುಮತಿ ಲಭಿಸಿತ್ತು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಟ ಶಿವರಾಜ್ಕುಮಾರ್, ಶಕ್ತಿಧಾಮದ ಅಧ್ಯಕ್ಷೆ ಗೀತಾ ಶಿವರಾಜ್ಕುಮಾರ್, ಉಪಾಧ್ಯಕ್ಷ ಕೆಂಪಯ್ಯ, ಇನ್ಫೊಸಿಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಷಾಜಿ ಮ್ಯಾಥ್ಯು, ಶಾಸಕ ಎಸ್.ಎ.ರಾಮದಾಸ್, ಸಂಸದ ಪ್ರತಾಪಸಿಂಹ ಪಾಲ್ಗೊಂಡಿದ್ದರು.
PublicNext
07/04/2022 06:49 pm