ಟ್ರೈಲರ್ ನಲ್ಲಿ ವಿಭಿನ್ನ ಲುಕ್ ನಿಂದ ಈಗಾಗಲೇ ಧೂಳೆಬ್ಬಿಸಿದ ಸಿನಿಮಾ ಆ್ಯಕ್ಟ್ 1978. ನಾತಿಚರಾಮಿ ಹಾಗೂ ಹರಿವು ಸಿನಿಮಾದ ಮೂಲಕ ವಿಭಿನ್ನ ಕಥಾ ಹಂದರದ ಸಿನಿಮಾಗಳನ್ನು ಕನ್ನಡಿಗರಿಗೆ ಕೊಟ್ಟ ನಿರ್ದೇಶಕ ಮನ್ಸೋರೆ ನಿರ್ದೇಶನದ ಸಿನಿಮಾ ಇದಾಗಿದೆ.
ತನ್ನ ಪೋಸ್ಟರ್ ಮೂಲಕ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ. ವಿಷಯ ಏನಂದ್ರೆ ಲಾಕ್ ಡೌನ್ ನಂತರ ಚಿತ್ರ ಮಂದಿರಗಳನ್ನು ತೆರೆಯಲು ಮಾಲೀಕರು ಹಿಂದೇಟು ಹಾಕ್ತಿದ್ದಾರೆ. ಜೊತೆಗೆ ನಿರ್ಮಾಪಕರು ಕೂಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಪೂರ್ವಾಪರ ಯೋಚಿಸುತ್ತಿದ್ದಾರೆ. ಚಿತ್ರರಂಗದ ಸ್ಥಿತಿಗತಿ ಹೀಗಿರುವಾಗ ನಿರ್ದೇಶಕ ಮನ್ಸೋರೆ ತಮ್ಮ 'ಆ್ಯಕ್ಟ್ 1978' ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ನಿರ್ಮಾಪಕ ದೇವರಾಜ್ ಆರ್ ಕೂಡ ಚಿತ್ರ ಬಿಡುಗಡೆಗೆ ಒಪ್ಪಿಗೆ ನೀಡಿದ್ದಾರೆ.
PublicNext
06/11/2020 12:49 pm