ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಸೆಕ್ಸ್ ಸಂಬಂಧಿತ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ‘ಆಪರೇಶನ್ ದುರಾಚಾರಿ’ ಎಂಬ ಮಹತ್ವದ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ‘ಆಪರೇಶನ್ ದುರಾಚಾರಿ’ ಪ್ರಾರಂಭಿಸಲಾಗಿದೆ. ಯಾರಾದರೂ ಲೈಂಗಿಕ ಸಂಬಂಧ ಅಪರಾಧಗಳನ್ನು ಮಾಡಿದರೆ, ಸೆಕ್ಸ್ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೆ ಅವರ ಫೋಟೋ, ಮಾಡಿದ ಅಪರಾಧದ ಉಲ್ಲೇಖ ಇರುವ ದೊಡ್ಡ ಪೋಸ್ಟರ್ಗಳನ್ನು ರಸ್ತೆಗಳ ಪಕ್ಕದಲ್ಲಿ ಹಾಕಲಾಗುವುದು. ಈ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಲು ಸಿಎಂ ಯೋಗಿ ಅವರೇ ನಿರ್ದೇಶನ ನೀಡಿದ್ದಾಗಿ ಸರ್ಕಾರದ ವಕ್ತಾರ ತಿಳಿಸಿದ್ದಾರೆ.
PublicNext
24/09/2020 08:08 pm