ಹುಬ್ಬಳ್ಳಿ : ಫೆ. 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23 ನೇ ಸಾಲಿನ ಒಟ್ಟು 39.45 ಲಕ್ಷ ಕೋಟಿ ಬಜೆಟ್ ಕೋತಿ ಮೂತಿಗೆ ಮೊಸರು ಸವರಿದಂತಾಗಿದೆ ಎನ್ನುವುದು ಜನಾಭಿಪ್ರಾಯ.
ಕೋವಿಡ್ , ಒಮಿಕ್ರಾನ್ ನಂತಹ ಭಯಾನಕ ಸಾಂಕ್ರಾಮಿಕದಿಂದ ಬಳಲಿದ ದೇಶದ ಜನತೆಯ ಜೀವನ ಮಟ್ಟ ಸುಧಾರಿಸುವ ಹಂತದಲ್ಲಿ ಬಜೆಟ್ ಇರಲಿದೆ ಎನ್ನುವ ಜನರ ನಿರೀಕ್ಷೆ ತಲೆಕೆಳಗಾಗಿದೆ. ಈ ಬಜೆಟ್ ಜನ ಜೀವನ ಸುಧಾರಣೆಗೆ ಬೂಸ್ಟರ್ ಆಗಲಿದೆ ಎನ್ನುವ ಸಾರ್ವಜನಿಕರ ನಂಬಿಕೆಯನ್ನು ನಿರ್ಮಲಾ ಹುಸಿಗೊಳಿಸಿದ್ದಾರೆ.
ಮುಂದಿನ 25 ವರ್ಷಗಳ ಭವಿಷ್ಯ ನೋಡಿ ಬಜೆಟ್ ಮಂಡಿಸಿದ್ದು ತುಘಲಕ್ ಸರ್ಕಾರದ ನೀತಿ ಅನುಸರಿಸಿದಂತಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ.
ಸದ್ಯ ಸಾಂಕ್ರಾಮಿಕ ಹೊಡೆತದಿಂದ ಸುಧಾರಿಸಿಕೊಳ್ಳುವ ಯೋಜನೆಗಳಿಗೆ ಒತ್ತು ನೀಡದ ಸರ್ಕಾರ ದೇಶದಲ್ಲಿ ಒಟ್ಟು 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳ ಸಂಚಾರ ಆರಂಭಕ್ಕೆ ಮುನ್ನುಡಿ ಬರೆದಿದೆ. ಆದಾಯ ತೆರಿಗೆಯಲ್ಲಿ ಯಾವುದೇ ರೀತಿಯ ಬದಲಾವಣೆ ತಂದಿಲ್ಲ,"ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಆಧರಿಸಿ ಆರ್ ಬಿಐ ಡಿಜಿಟಲ್ ಕರೆನ್ಸಿಗೆ ಒತ್ತು ನೀಡಲಾಗಿದೆ.
ಇತ್ತ ಬದುಕಿಗೆ ಬೇಕಾದ ಮೂಲ ಸೌಕರ್ಯಗಳಲ್ಲಿ ಒಂದಾದ ತೈಲ ಬೆಲೆ ಇಳಿಕೆಯಿಲ್ಲ, ಗ್ಯಾಸ್ ಬೆಲೆ ಇಳಿಕೆ ಇಲ್ಲ. ಮತ್ತೊಂದೆಡೆ ರೈತರ ಕಣ್ಣೋರಿಸೊ ತಂತ್ರದಲ್ಲಿ 2022-23 ನೇ ಸಾಲಿನ ಬಜೆಟ್ ಅಂತ್ಯವಾಗಿದೆ.
ಅತ್ತ ಪಂಚರಾಜ್ಯಗಳ ಚುನಾವಣೆಗೂ ಯಾವುದೇ ಪ್ರೋತ್ಸಾಹ ಸಿಕ್ಕಿಲ್ಲ. ಈ ಬೆಳವಣಿಗೆಯನ್ನು ಗಮನಿಸಿದ ಜನ ಅಸಮಾಧಾನಗೊಂಡಿದ್ದಾರೆ.
ಈ ಕುರಿತು ಪಬ್ಲಿಕ್ ನೆಕ್ಸ್ಟ್ ನಡೆಸಿದ ಜನರ ಅಭಿಪ್ರಾಯ ಸಂಗ್ರಹ ಪೋಲ್ ನಲ್ಲಿ ಭಾಗವಹಿಸಿದ ಲಕ್ಷಾಂತರ ಜನರ ಪೈಕಿ ಜನಾಭಿಪ್ರಾಯ ಹೀಗಿದೆ.
ಕೇಂದ್ರ ಸರ್ಕಾರ ಫೆ. 1 ರಂದು ಮಂಡಿಸಿದ 2022-23 ನೇ ಸಾಲಿನ ಬಜೆಟ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತಮ 28.62%
ಅತ್ಯುತ್ತಮ 15.81%
ಸಾಧಾರಣ 24.54%
ಕಳಪೆ 31.03%
ಒಟ್ಟು ಬಜೆಟ್ ಬಗ್ಗೆ ಕಳಪೆ ಓಟಿಂಗ್ ನಲ್ಲಿಯೇ ಅತೀ ಹೆಚ್ಚು ಜನ ಭಾಗವಹಿಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವುದ ಮೇಲ್ನೋಟಕ್ಕೆ ಕಂಡು ಬಂದಿದೆ.
PublicNext
03/02/2022 11:25 am