ಬೆಂಗಳೂರು: ಐಟಿ ಬಿಟಿ ಕ್ಷೇತ್ರದಲ್ಲಿ ವಿಶ್ವದಲ್ಲಿ ಉತ್ತುಂಗದಲ್ಲಿರುವ ಕರ್ನಾಟಕದ ಸಾಧನಗೆ ಪೂರಕವಾಗಿ ರಾಜ್ಯ ಸರ್ಕಾರ ಯುವ ನವೋದ್ಯಮಿಗಳನ್ನು ಹೆಚ್ಚಾಗಿ ಪ್ರೋತ್ಸಾಹಿಸಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಹಾಗೂ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಇಲಾಖೆ ಆಶ್ರಯದಲ್ಲಿ ವಿಧಾನ ಸೌಧದಲ್ಲಿ ನಡೆದ ಸಮಾರಂಭದಲ್ಲಿ ನವೋದ್ಯಮಗಳಿಗೆ ಎಲಿವೇಟ್ ಉನ್ನತಿ ಪ್ರಶಸ್ತಿ ಹಾಗೂ ಪ್ರೋತ್ಸಾಹ ಧನ ನೀಡಿ ಅವರು ಮಾತನಾಡಿದರು.
ಈ ಬಾರಿಯ ಟಾಪರ್ ಆಗಿರುವ ಕಲ್ಯಾಣ ಕರ್ನಾಟಕ ಭಾಗದ ಯುವ ಉದ್ಯಮಿ ಬೀದರ್ ಮೂಲದ ಅಗರಿಕಾ ಸೊಲ್ಯೂಷನ್ ಸಂಸ್ಥೆಯ ದೀಪಕ್ ದಿಲ್ಲೆ ಅವರಿಗೆ 30 ಲಕ್ಷ ಪ್ರೋತ್ಸಾಹ ಧನ ನೀಡಲಾಯಿತು. ಇವರು ಕೃಷಿ ತ್ಯಾಜ್ಯ ಹಾಗೂ ನಗರ ಸಭೆಯ ಘನ ತ್ಯಾಜ್ಯ ಉಪಯೋಗಿಸಿ ಇಟ್ಟಿಗೆ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ತಯಾರಿಸುತ್ತಾರೆ.
ಉಳಿದಂತೆ ಇನ್ನು ಹಲವಾರು ಸ್ಟಾರ್ಟ್ ಅಪ್ ಗಳಿಗೆ ಪ್ರೋತ್ಸಾಹ ಧನವನ್ನು ಡಿಸಿಎಂ ಅಶ್ವತ್ಥ ನಾರಾಯಣ ವಿತರಿಸಿದರು.
PublicNext
22/01/2021 10:54 pm