ನವದೆಹಲಿ: ಚೀನಾದಲ್ಲಿ ಉತ್ಪಾದಿಸಿದ ಕಾರು, ಕಾರಿನ ಬಿಡಿಭಾಗಗಳನ್ನು ಭಾರತಕ್ಕೆ ತರಬೇಡಿ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಟೆಸ್ಲಾ ಕಂಪನಿಗೆ ಸೂಚಿಸಿದ್ದಾರೆ.
ಹೌದು. ಗಡಿಯಲ್ಲಿ ಚೀನಾ ತನ್ನ ತಂಟೆಯನ್ನು ಮುಂದುವರಿಸಿದೆ. ಅರುಣಾಚಲ ಪ್ರದೇಶದೊಳಕ್ಕೆ ನುಗ್ಗಿರುವ ಚೀನಾ ಸದ್ದಡಗಿಸಲು ಭಾರತ ಸಜ್ಜಾಗಿದೆ. ನಾಳೆ (ಅಕ್ಟೋಬರ್ 10) ಮೊಲ್ಡಾದಲ್ಲಿ ಕಮಾಂಡರ್ ಮಟ್ಟದ ಮಾತುಕತೆಯೂ ನಡೆಯಲಿದೆ. ಈ ನಡುವೆಯೇ ನಿತಿನ್ ಗಡ್ಕರಿ ಚೀನಾಗೆ ಆಘಾತ ನೀಡಿದ್ದಾರೆ.
ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿ ಭಾರತದಲ್ಲಿ ಕಾರ್ಯಾರಂಭ ಮಾಡುತ್ತಿದೆ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿಯಾಗಿರುವ ಟೆಸ್ಲಾ ಹಲವು ದೇಶದಲ್ಲಿ ಘಟಕ ಹೊಂದಿದೆ. ಹಲವು ದೇಶಗಳಿಗೆ ಚೀನಾ ಘಟಕದಿಂದಲೇ ಕಾರಿನ ಬಿಡಿಭಾಗ ಹಾಗೂ ಕಾರು ಪೂರೈಕೆಯಾಗುತ್ತಿದೆ. ಆದರೆ ಭಾರತಕ್ಕೆ ಮೇಡ್ ಇನ್ ಚೀನಾ ಉತ್ಪನ್ನ ಬೇಡ. ಇಲ್ಲಿ ಚೀನಾ ಘಟಕದಲ್ಲಿ ಉತ್ಪಾದನೆಯಾದ ಟೆಸ್ಲಾ ಕಾರನ್ನು ಮಾರಾಟಮಾಡಬೇಡಿ ಎಂದು ಟೆಸ್ಲಾಗೆ ಗಡ್ಕರಿ ಸೂಚನೆ ನೀಡಿದ್ದಾರೆ.
PublicNext
09/10/2021 08:06 pm