ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ.15ರಿಂದ ಎರಡು ದಿನಗಳ ಕಾಲ ಅಮಿತ್ ಶಾ ರಾಜ್ಯ ಪ್ರವಾಸ- ಭದ್ರವಾತಿಗೂ ಭೇಟಿ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನವರಿ 15ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಅವರು ಭದ್ರಾವತಿ, ಹೊಸಪೇಟೆ ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

ಅಮಿತ್‌ ಶಾ ಅವರು ಜನವರಿ 15 ಅಥವಾ 16ರಂದು ಭದ್ರಾವತಿಯಲ್ಲಿ ಸಿಆರ್​ಪಿಎಫ್​ ತರಬೇತಿ ಕೇಂದ್ರ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಕೈಗಾರಿಕಾ ಸಾಗರದಲ್ಲಿ ಕರ್ನಾಟಕ ಭದ್ರತಾ ತರಬೇತಿ ಕೇಂದ್ರ ಸ್ಥಾಪನೆಯಾಗುತ್ತಿದೆ. 2016ರ ಜೂನ್‌ನಲ್ಲಿ ಶಿವಮೊಗ್ಗದಲ್ಲಿ ಕೋಮು ಗಲಭೆಗಳು ನಡೆದಾಗ ವಿಧಾನಸಭಾ ಅಧಿವೇಶನದಲ್ಲಿ ಆಗ ಶಿವಮೊಗ್ಗ ಶಾಸಕರಾಗಿದ್ದ ಕೆ.ಬಿ.ಪ್ರಸನ್ನಕುಮಾರ್ ಗಲಭೆ ಬಗ್ಗೆ ಪ್ರಸ್ತಾಪಿಸಿದ್ದರು.

ಇದೀಗ ಸುಮಾರು 200 ಕೋಟಿ ರೂ.ಗಳ ಅನುದಾನದಲ್ಲಿ ಭದ್ರಾವತಿಯಲ್ಲಿ ಆರ್‍ಎಎಫ್ ಘಟಕ ಸ್ಥಾಪನೆಗೆ ಮುಂದಾಗಿದೆ. ಇಲ್ಲಿ ಸುಮಾರು 1,200ಕ್ಕೂ ಹೆಚ್ಚು ಸಿಬ್ಬಂದಿ ಇರಲಿದ್ದು, ಅವರಿಗೆ ತರಬೇತಿ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇಲ್ಲಿಂದಲೇ ಕರ್ನಾಟಕ ಮತ್ತು ಗೋವಾದಲ್ಲಿ ಎಲ್ಲಿಯೇ ಗಲಭೆ ಸಂಭವಿಸಿದರೂ ನಿಯಂತ್ರಣಕ್ಕಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆ ತುಕಡಿಗಳನ್ನು ರವಾನಿಸಲಾಗುವುದು. ಕೇವಲ ಗಲಭೆ ಅಷ್ಟೇ ಅಲ್ಲದೆ ನೆರೆ ಹಾವಳಿ, ಅಗ್ನಿ ಅವಘಡ, ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೂ ರವಾನಿಸಲಾಗುತ್ತದೆ.

ಭದ್ರಾವತಿಯ ಬುಳ್ಳಾಪುರ ಬಳಿ ಇರುವ ಪೋಲೀಸ್ ಇಲಾಖೆಗೆ ಸೇರಿದ ಮಿಲಿಟರಿ ಕ್ಯಾಂಪ್‌ನ 50 ಎಕರೆ ಭೂಮಿಯನ್ನು ಈ ಘಟಕ ಸ್ಥಾಪನೆಗಾಗಿ ಗುರುತಿಸಲಾಗಿದೆ.

Edited By : Vijay Kumar
PublicNext

PublicNext

25/12/2020 04:22 pm

Cinque Terre

33.61 K

Cinque Terre

0