ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನರು ಕಷ್ಟದಲ್ಲಿರುವಾಗ ರಾತ್ರಿ ಕರ್ಫ್ಯೂ ಬೇಡವಾಗಿತ್ತು: ಕೋನರೆಡ್ಡಿ

ಬೆಳಗಾವಿ: ಕೊರೊನಾ ಹೊಡೆತದಿಂದ ರಾಜ್ಯದ ಜನತೆ ಮೊದಲೇ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ನೈಟ್ ಕರ್ಫ್ಯೂ ಜಾರಿ ಬೇಡವಾಗಿತ್ತು ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ಜನರು ಮುಂಜಾಗ್ರತೆ ವಹಿಸುವುದನ್ನು ಕಲಿತಿದ್ದಾರೆ.

ಕಡೇಪಕ್ಷ ಬೆಂಗಳೂರಿನಲ್ಲಿರುವ ಎಲ್ಲ ಪಕ್ಷದ ಶಾಸಕರನ್ನು ಕರೆದು ಮಾತನಾಡಿಸಬೇಕಿತ್ತು. ಬ್ರಿಟನ್‌ನಿಂದ ಈಗಾಗಲೇ ಅಷ್ಟು ಜನ, ಇಷ್ಟು ಜನ ಬಂದಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲಿಂದ ಬಂದವರನ್ನು ದೆಹಲಿಯಲ್ಲೇ ತಡೆಯಬೇಕಿತ್ತು. ಅಲ್ಲೇ ಕ್ವಾರಂಟೈನ್ ಮಾಡಬೇಕಿತ್ತು. ಇವರಿಗೆ ಮೊದಲೇ ಮಾಹಿತಿ ಇರಲಿಲ್ವಾ? ಕೇಂದ್ರ, ರಾಜ್ಯ ಸರ್ಕಾರಗಳು ಕೊರೊನಾವನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : Nagaraj Tulugeri
PublicNext

PublicNext

24/12/2020 03:50 pm

Cinque Terre

60.94 K

Cinque Terre

5

ಸಂಬಂಧಿತ ಸುದ್ದಿ