ಮೈಸೂರು: ಸಿದ್ದರಾಮಯ್ಯ ಅವರ ಇತ್ತೀಚಿನ ಮಾತುಗಳನ್ನು ಕೇಳುತ್ತಿದ್ದರೆ ಅವರಿಗೆ ಕಾಂಗ್ರೆಸ್ ಪಕ್ಷವನ್ನು ಮುಳುಗಿಸುವ ಹುನ್ನಾರ ಇದ್ದಂತೆ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಕಡೆ ಬಲಗೈ ದಲಿತರು ಮತ ಹಾಕಿಲ್ಲ ಎಂದು ಹೇಳಿ, ಇದರಿಂದ ಅವರ ಮತ ಬ್ಯಾಂಕ್ ಹಾಳಾಗಿದೆ.
ಸಿದ್ದರಾಮಯ್ಯ ಅವರಿಗೆ ಸಿಎಂ ಆದ ಮೇಲೆ ಬೇರೆ ಯಾರು ಸಿಎಂ ಆಗಬಾರದು ಅನ್ನೋ ಮನೋಭಾವವಿದೆ. ಇದನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕು. 140 ಸ್ಥಾನ ಗೆಲ್ಲುವ ಕಾಂಗ್ರೆಸ್ ಪಕ್ಷ 20 ಸ್ಥಾನಗಳನ್ನೂ ಗೆಲ್ಲುವುದಿಲ್ಲವೇ ಅನ್ನೋ ಚರ್ಚೆ ಆರಂಭವಾಗಿದೆ. ಸಿದ್ದರಾಮಯ್ಯನವರೇ, ಇನ್ನಾದರೂ ನಿಮ್ಮ ದುರಂಹಕಾರದ ಮಾತನ್ನು ನಿಲ್ಲಿಸಿ ಎಂದು ವಿಶ್ವನಾಥ್ ಹೇಳಿದರು.
ಕೊಡಗಿನವರು ಹಸು ಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೊಡವರು ಹಸುವನ್ನು ಪೂಜೆ ಮಾಡುತ್ತಾರೆ. ಇದು ಕೊಡವರಿಗೆ ಮಾಡಿದ ಅವಮಾನ. ನಿಮ್ಮ ಹೇಳಿಕೆಗೆ ನೀವೇ ಕೊಡವ ಸಮುದಾಯದವರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
PublicNext
24/12/2020 03:31 pm