ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮಣೆ ಹಾಕಿದ್ದೇ ತೃಣಮೂಲ ಕಾಂಗ್ರೆಸ್ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಗುಡುಗಿದ್ದಾರೆ.
ಬುಧವಾರ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಬಂಗಾಳದ ಜನರು ಬಿಜೆಪಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ಆದರೆ 1999ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಟಿಎಂಸಿ-ಬಿಜೆಪಿ ಮೈತ್ರಿ ರಚಿಸುವ ಮೂಲಕ ಮಮತಾ ಬ್ಯಾನರ್ಜಿ ಅವರು ಬಂಗಾಳದಲ್ಲಿ ಬಿಜೆಪಿಗೆ ರಾಜಕೀಯ ಬಾಗಿಲು ತೆರೆದರು. ಹೀಗಾಗಿ ಬಿಜೆಪಿಯು ಬಂಗಾಳದಲ್ಲಿ ತನ್ನ ಹೆಜ್ಜೆಯನ್ನು ಬಲಪಡಿಸಬಹುದು ಎಂದು ನಾವು ಮಮತಾ ಬ್ಯಾನರ್ಜಿ ಅವರನ್ನು ಎಚ್ಚರಿಸಿದ್ದೇವು ಎಂದು ಹೇಳಿದರು.
PublicNext
24/12/2020 11:54 am