ಕಠ್ಮಂಡು: ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ದಹಲ್- ನೇಪಾಳ ಬಣವು ಪುಷ್ಪ ಕಮಲ್ ದಹಲ್ ಅವರನ್ನು ತಮ್ಮ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಿದೆ.
ನೇಪಾಳ ರಾಜಕೀಯದಲ್ಲಿ ನಡೆದ ಹಠಾತ್ ಬೆಳವಣಿಗೆಯಲ್ಲಿ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ನೇಪಾಳದ ಸಂಸತ್ನ್ನು ಡಿಸೆಂಬರ್ 20ರಂದು ವಿಸರ್ಜಿಸಿದ್ದರು. ಹೀಗಾಗಿ ನ್ಯೂ ಬನೇಶ್ವರ ಸಂಸತ್ ಕಟ್ಟಡದಲ್ಲಿ ಬುಧವಾರ ನಡೆದ ಪಕ್ಷದ ದಹಲ್- ನೇಪಾಳ ಬಣದ ಮುಖಂಡರ ಸಭೆ ನಡೆಸಲಾಯಿತು. ಈ ವೇಳೆ ಕೆ.ಪಿ ಓಲಿಯನ್ನು ಪಕ್ಷದ ಸಂಸದೀಯ ನಾಯಕ ಸ್ಥಾನದಿಂದ ಉಚ್ಚಾಟಿಸಿದೆ. ಆ ಸ್ಥಾನಕ್ಕೆ ಪುಷ್ಪ ಕಮಲ್ ದಹಲ್ ಅವರನ್ನು ನಾಮನಿರ್ದೇಶನ ಮಾಡಲು ಹಿರಿಯ ನಾಯಕ ಮಾಧವ್ ಕುಮಾರ್ ನೇಪಾಳ ಪ್ರಸ್ತಾಪವನ್ನಿಟ್ಟ ನಂತರ ಎಲ್ಲಾ ನಾಯಕರು ಸರ್ವಾನುಮತದಿಂದ ಅವರ ನಿರ್ಧಾರಕ್ಕೆ ಅನುಮೋದನೆ ನೀಡಿದ್ದಾರೆ.
ದಹಲ್-ನೇಪಾಳ ಬಣ ಈ ಹಿಂದೆ ಮಾಧವ್ ಕುಮಾರ್ ನೇಪಾಳ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿತ್ತು. ದಹಲ್ ಮತ್ತು ಮಾಧವ್ ಕುಮಾರ್ ಇಬ್ಬರೂ ಈಗ ಹೊಸದಾಗಿ ರೂಪುಗೊಂಡ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
PublicNext
23/12/2020 06:31 pm