ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಿಕ್ಷುಕನನ್ನೇ ಚುನಾವಣೆಗೆ ನಿಲ್ಲಿಸಿದರು ಈ ಗ್ರಾಮಸ್ಥರು..!

ಮೈಸೂರು: ಸಾಹಸ ಸಿಂಹ ವಿಷ್ಣುವರ್ಧನ್‌ ಅಭಿನಯದ ಸಿಂಹಾದ್ರಿಯ ಸಿಂಹ ಸಿನಿಮಾದಲ್ಲಿ ಒಂದು ಸೀನ್ ಇದೆ, ಅಲ್ಲಿನ ಕಥಾನಾಯಕ ಒಬ್ಬ ಭಿಕ್ಷುಕನನ್ನು ಚುನಾವಣೆಗೆ ನಿಲ್ಲಿಸಿ ಮಂತ್ರಿಯನ್ನಾಗಿ ಮಾಡಲು ಶ್ರಮಿಸುತ್ತಾರೆ. ಈ ಚಿತ್ರದಿಂದ ಪ್ರೇರಣೆ ಪಡೆದು ಭಿಕ್ಷುಕನೋರ್ವನನ್ನು ಗ್ರಾ.ಪಂ ಚುನಾವಣೆಗೆ ನಿಲ್ಲಿಸಿದ ಘಟನೆ, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಳಿಮಾವು ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ತಾಲ್ಲೂಕಿನ ಹುಳಿಮಾವು ಗ್ರಾಪಂ ವ್ಯಾಪ್ತಿಗೆ ಬರುವ ಬೊಕ್ಕಹಳ್ಳಿ ಗ್ರಾಮದ ಯುವಕರು ಈ ರೀತಿ ವಿನೂತನ ಪ್ರಯತ್ನ ಮಾಡಿದ್ದಾರೆ. ಬೊಕ್ಕಹಳ್ಳಿ ಗ್ರಾಮದ ನಿವಾಸಿ ಅಂಕನಾಯಕ ಎಂಬುವರು ನಾಮಪತ್ರ ಸಲ್ಲಿಸಿದ ವ್ಯಕ್ತಿ. ಈತ ಊರೂರು ತಿರುಗುತ್ತಾ, ಒಂದೊತ್ತಿನ ಊಟಕ್ಕೂ ಪಡೆದಾಡುತ್ತಿದ್ದ. ಗ್ರಾಮದ ಬಸ್ ನಿಲ್ದಾಣ ಮತ್ತು ಅಲ್ಲಲ್ಲಿ ಅಂಕನಾಯಕ ವಾಸ ಮಾಡುತ್ತಿದ್ದ. ಈತ ವಿಶೇಷ ಚೇತನರಾಗಿದ್ದು, ಹಲವಾರು ವರ್ಷಗಳಿಂದ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

21/12/2020 05:31 pm

Cinque Terre

107.45 K

Cinque Terre

26

ಸಂಬಂಧಿತ ಸುದ್ದಿ