ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃತಕ ಹೊಟ್ಟೆ ನೋವಿಗೆ ಔಷಧಿ ಕೊಡಲು ಸಾಧ್ಯವೇ?: ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ನಿಜವಾಗಿಯೂ ಹೊಟ್ಟೆ ನೋವು ಇದ್ದಲ್ಲಿ ಔಷಧಿ ಕೊಡಬಹುದು. ಆದರೆ ಕೃತಕ ಹೊಟ್ಟೆ ನೋವು ಇದ್ದರೆ ಅದಕ್ಕೆ ವೈದ್ಯರು ಔಷಧಿ ಕೊಡಲು ಸಾಧ್ಯನಾ? ಹೀಗಂತ ಪ್ರಶ್ನಿಸಿದ್ದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ.

ಗುಬ್ಬಿ ಜೆಡಿಎಸ್‌ ಶಾಸಕ ಎಸ್‌ ಆರ್‌ ಶ್ರೀನಿವಾಸ್‌ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ಅವರು ದೇವೇಗೌಡರ ಸೋಲಿಗೆ ಏನು ಹಾಗೂ ಯಾರು ಕಾರಣ ಎಂಬುವುದು ಚೆನ್ನಾಗಿ ಗೊತ್ತು ಎಂದು ತಿರುಗೇಟು ನೀಡಿದರು.

ಭಾನುವಾರ ಕಾಂಗ್ರೆಸ್‌ ಮಾಜಿ ಶಾಸಕ ರಾಜಣ್ಣ ಅವರ ಜೊತೆಗೆ ಗುಬ್ಬಿ ಜೆಡಿಎಸ್‌ ಶಾಸಕ ಎಸ್‌. ಆರ್‌ ಶ್ರಿನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಜೆಡಿಎಸ್‌ ಬಿಜೆಪಿ ಜೊತೆಗೆ ವಿಲೀನ ಆದ್ರೆ ಪಕ್ಷ ಬಿಡುವುದಾಗಿ ಎಚ್ಚರಿಕೆ ನೀಡಿದ್ದರು.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್ ಪಕ್ಷ, ಬಿಜೆಪಿ ಜೊತೆಗೆ ಒಳಒಪ್ಪಂದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಳಒಪ್ಪಂದ ಮಾಡಿದ್ದು ಸತ್ಯ, ಆದರೆ ಎಸ್‌ಆರ್‌ ಶ್ರೀನಿವಾಸ್‌ ಅವರು ತುರುವೇಕೆರೆ ಕ್ಷೇತ್ರದಲ್ಲಿ ಒಳಒಪ್ಪಂದ ಮಾಡಿದ್ದಾರೆ. ಅಲ್ಲಿ ನಮ್ಮ ಅಭ್ಯರ್ಥಿ ಸೋಲಲು ಹಾಗೂ ಬಿಜೆಪಿ ಅಭ್ಯರ್ಥಿ ಗೆಲ್ಲಲು ಶ್ರೀನಿವಾಸ್ ಕಾರಣ ಎಂದು ಕಿಡಿಕಾರಿದರು.

ಶ್ರೀನಿವಾಸ್ ಅವರನ್ನು ಸಚಿವರನ್ನಾಗಿ ಮಾಡಿದ್ದೆ, ಅವರಿಗೆ ಸಣ್ಣ ಇಲಾಖೆ ಕೊಟ್ಟಿದ್ದೆ, ಆದ್ರೆ ಅವರು ಹಣಕಾಸುನಂತಹ ದೊಡ್ಡ ಇಲಾಖೆಯ ನಿರೀಕ್ಷೆಯಲ್ಲಿದ್ದರು. ಅವರು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ, ಅವರ ಸಂಬಂಧ ಯಾರ ಜೊತೆ ಇದೆ ಅನ್ನೋದು ಗೊತ್ತು ಎಂದು ಕೆಂಡಾಮಂಡಲರಾದರು.

Edited By : Nagaraj Tulugeri
PublicNext

PublicNext

21/12/2020 05:02 pm

Cinque Terre

72.07 K

Cinque Terre

3