ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ : ಕೇಶವ ನಾಡಕರ್ಣಿ
ನಿರಂತರ ಸೋಲಿನಿಂದ ಜರ್ಜರಿತವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ನೀಡಲು ಶನಿವಾರ ಕಾರ್ಯಾಧ್ಯಕ್ಷೆ ಸೋನಿಯಾ ನಿವಾಸ, 10 ಜನ್ ಪಥ್ ದಲ್ಲಿ ಹಿರಿಯ ಕಾಂಗ್ರೆಸ್ಸಿಗರ ಚಿಂತನ್ ಸಭೆ ಜರುಗಿತು.
ಕೊರೊನಾ ನಿರಂತರ ನಡೆದ 5 ತಾಸಿನ ಮೊದಲ ಸಭೆಯಲ್ಲಿ ಮಾಜಿ ಪ್ರಧಾನ ಮನಮೋಹನ ಸಿಂಗ್ (ಇವರು ಇದ್ದರೂ ಇಲ್ಲದಿದ್ದರೂ ವ್ಯತ್ಯಾಸ ಬೀಳುವುದಿಲ್ಲ ), ಅಶೋಕ್ ಗೆಹಲೋಟ್, ಭೂಪೆಂದ್ರಸಿಂಗ್ ಹುಡ್ಡಾ, ಪಿ.ಚಿದಂಬರಮ್, ಪೃಥ್ವಿರಾಜ್ ಚವ್ಹಾಣ್, ಅಂಬಿಕಾ ಸೋನಿ, ಮನೀಶ್ ತಿವಾರಿ, ಆನಂದ ಶರ್ಮಾ, ಗುಲಾಂ ನಬಿ ಆಜಾದ್ ಹಾಜರಿದ್ದರು.
ಸಭೆ ಅಜಂಡಾ ಕಾಂಗ್ರೆಸ್ ಮಜ್ಬೂತ್ ಪಡಿಸುವುದು, ಅಂದರೆ ಬಲಪಡಿಸುವುದು. ಹಾಸ್ಯಾಸ್ಪದವೆಂದರೆ ಸಧ್ಯದ ಪರಿಸ್ಥಿತಿಯಲ್ಲಿ ಪಕ್ಷದ "ಮಜ್ಬೂತಿ '' ಅಲ್ಲ....ಕಾಂಗ್ರೆಸ್ಸಿನ "ಮಜ್ಬೂರಿ ''... ಹಾಗೂ ಗಾಂಧಿ ಪರಿವಾರದ " ಜರೂರಿ '' ಆಗಿರಬಹುದು.
ರಾಹುಲ್ ಒಬ್ಬ ಅಸಮರ್ಥ ನಾಯಕ, ಇಮ್ ಮ್ಯಾಚೂರ್, ಇವರ ನೇತೃತ್ವದಲ್ಲಿ ಮುನ್ನಡೆದರೆ ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ, ನಮಗೆ ಪಾರ್ಟ್ ಟೈಂ ಅಧ್ಯಕ್ಷ ಬೇಡ ಎಂದು ಸೋನಿಯಾ ಗಾಂಧಿಗೆ, ಕಪಿಲ್ ಸಿಬ್ಬಲ್ , ಆನಂದ ಶರ್ಮಾ, ಮನಿಶ್ ತಿವಾರಿ, ಗುಲಾಂ ನಬಿ ಆಜಾದ್ ಸೇರಿ 23 ಜನ ಹಿರಿಯ ತಲೆಗಳ ಬರೆದಿದ್ದ ಪತ್ರ ಕೋಲಾಹಲವುಂಟು ಮಾಡಿತ್ತು.
ಆಗ ಪತ್ರದ ವಿರುದ್ಧ ಸಿಡಿದೆದ್ದಿ ಇದೇ ರಾಹುಲ್ ಗಾಂಧಿ, ಕಪಿಲ್ ಸಿಬ್ಬಲ್, ಗುಲಾಂ ನಬಿ ಆಜಾದ್, ಆನಂದ ಶರ್ಮಾ ಅವರನ್ನು ಬಿಜೆಪಿ ಏಜೆಂಟರ್ ಎಂದು ಟೀಕಿಸಿದ್ದರು.
ಮೋದಿಯನ್ನು ಎದುರಿಸಲು ಸಾಧ್ಯವಾಗದೆ ಹೇಡಿಗಳಂತೆ ಮಾತನಾಡುತ್ತಿದ್ದೀರಿ, ನನ್ನ ತಮ್ಮನೊಬ್ಬನೇ ಮೋದಿಯನ್ನು ಎದುರಿಸಲು ಸಮರ್ಥನಾಗಿದ್ದಾನೆ ಎಂದು ಪ್ರಿಯಾಂಕಾ ವಾಡ್ರಾ ಸಹೋದರನನ್ನು ಸಮರ್ಥಿಸಿಕೊಂಡು ಬಂಡಾಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಳು.
ಈ ಬಂಡಾಯ ನಾಯಕರಿಲ್ಲದೆ ಕಾಂಗ್ರೆಸ್ಸಿಗೆ ಏಳ್ಗೆ ಇಲ್ಲ ಎಂದು ಮನಗಂಡಿರುವ ಸೋನಿಯಾ ಅವರು, ಸಭೆಯಲ್ಲಿ ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗದುಕೊಂಡ " ಈವರೆಗೂ ನೀವೆಲ್ಲ ಹೇಳಿದಂತೆಯಾ ನಾನು ನಿರ್ಣಯ ಕೈಗೊಂಡಿದ್ದೇನೆ. ಎಲ್ಲ ನಾಯಕರೂ ನನ್ನ ಕೈ ಬಲಪಡಿಸಿದ್ದೀರಿ, ಅದೇ ರೀತಿ ಮುಂದೆಯೂ ರಾಹುಲ್ ನನ್ನು ಕೈ ಹಿಡಿದು ನಡೆಸಿರಿ '' ಎಂದು ಮನವಿ ಮಾಡಿದರಂತೆ. ಅದಕ್ಕೆ ಬಂಡಾಯ ನಾಯಕರೆಲ್ಲರೂ ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದರಂತೆ.
ಬಲ್ಲ ಮೂಲಗಳ ಪ್ರಕಾರ, ಮುಂದಿನ ಏಪ್ರಿಲ್ ದಲ್ಲಿ ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಂಡಾಯ ನಾಯಕರು ಪ್ರಿಯಾಂಕಾ ವಾಡ್ರಾ ಅವರನ್ನು ಅಧ್ಯಕ್ಷೆ ಮಾಡುವ ಎಲ್ಲ ಸಿದ್ಧತೆಯಗಳನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. ದೇಶದ ಬಹುತೇಕ ಯುವ ಕಾಂಗ್ರೆಸ್ಸಿರ ಆಕಾಂಕ್ಷೆಯೂ ಅದೇ ಆಗಿದೆ. ಆದರೆ ಸೋನಿಯಾಗೆ ಪ್ರಿಯಾಂಕಾ ಅಧ್ಯಕ್ಷೆಯಾಗುವುದು ಇಷ್ಟವಿಲ್ಲ ಎನ್ನಲಾಗಿದೆ.
ಇದೇ ಕಾರಣಕ್ಕೆ ಹಿರಿಯರ ಬಂಡಾಯ ಶಮನ ಮಾಡುವ ನೆಪದಲ್ಲಿ ರಾಹುಲ್ ಗಾಂಧಿಯನ್ನು ಪುನರ್ ಪ್ರತಿಷ್ಠಾಪಿಸುವ ಚಾಣಾಕ್ಷತನ ಸೋನಿಯಾ ಅವರದಾಗಿತ್ತು ಎಂದೂ ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬದ ಪ್ರೈವೇಟ್ ಲಿಮಿಟೆಡ್ ಕಂಪನಿಯಂತಾಗಿದೆ. ಅದಕ್ಕಾಗಿಯೇ ಸೋನಿಯಾ ಕಿಚನ್ ಕ್ಯಾಬಿನೆಟ್ ದಲ್ಲಿರುವ ಗುಲಾಂ ನಬಿ ಆಜಾದ್, ಕಪಿಲ್ ಸಿಬ್ಬಲ್, ಆನಂದಶರ್ಮಾ, ಪವನ್ ಬನ್ಸಲ್ ಅವರಂತಹ ನಾಯಕರಿಗೆ ಈ ಕಂಪನಿ ಉಳಿದರೆ ತಾವು ಉಳಿಯ ಬಹುದು ಎಂಬುದು ಮನದಟ್ಟಾಗಿದೆ. ಅದಕ್ಕಾಗಿಯೆ ನಯವಾಗಿ ರಾಹುಲ್ ಗಾಂಧಿಯನ್ನು ಒಪ್ಪಿಕೊಳ್ಳಲು ಮುಂದಾಗಿದ್ದಾರೆ ಎನ್ನಬಹುದು.
ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸೋತ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆ ಸಿದ್ದತೆಗಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ ಸಚಿವ ಅಮಿತ್ ಶಾ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಅಸ್ವಿತ್ವದ ಪ್ರಶ್ನೆಯಾಗಿರುವುದರಿಂದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬಿಜೆಪಿ ಟಕ್ಕರ್ ಕೊಡಲು ರಣತಂತ್ರ ರೂಪಿಸುತ್ತಿದ್ದಾರೆ. ಆದರೆ ಎಲ್ಲಿದೆ ಕಾಂಗ್ರೆಸ್, ಎಲ್ಲಿದ್ದಾರೆ ರಾಹುಲ್ ಗಾಂಧಿ? ಬಂಗಾಳದಲ್ಲಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ಸಿಗೆ ಯಾವುದೇ ಆಲೋಚನೆ ಇಲ್ಲವೆ?
ರಾಹುಲ್ 15 ದಿನ ಪ್ರಚಾರ ಮಾಡಿದರೆ ವಿಶ್ರಾಂತಿಗಾಗಿ 15 ದಿನ ಯುರೋಪ್ ಥೈಲ್ಯಾಂಡಿಗೆ ತೆರಳುತ್ತಾರೆ. ಇದೇ ಕಾರಣಕ್ಕೆ ಯುಪಿಎ ಅಂಗ ಪಕ್ಷಗಳಿಗೆ ಕಾಂಗ್ರೆಸ್ ಮೇಲೆ ಭರವಸೆ ಇಲ್ಲ. ಈ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸುತಾರಾಂ ಒಪ್ಪುತ್ತಿಲ್ಲ. ತನ್ನ ಅಸ್ವಿತ್ವ ಉಳಿಸಿಕೊಳ್ಳಬೇಕಿದ್ದರೆ 2024 ರ ಲೋಕಸಭೆ ಚುನಾವಣೆ ಪೂರ್ವದಲ್ಲಿಯೆ ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬದ ಗುಲಾಮಗಿರಿಯಿಂದ ಹೊರಬರಬೇಕು? ಆದರೆ ಅದು ಸಾಧ್ಯವೆ? ಅಂತಹ ಸಮರ್ಥ ನಾಯಕರು ಪಕ್ಷದಲ್ಲಿದ್ದಾರೆಯೇ? ಹಾಗಾದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
PublicNext
20/12/2020 01:32 pm