ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಡಿಹಳ್ಳಿಯಿಂದ 3 ದಿನಗಳಲ್ಲಿ ರಾಜ್ಯಕ್ಕೆ 158 ಕೋಟಿ ರೂ.ನಷ್ಟ: ಬಿಸಿ ಪಾಟೀಲ್

ಕಾರವಾರ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವರಿಂದ 3 ದಿನಗಳಲ್ಲಿ ರಾಜ್ಯಕ್ಕೆ 157ರಿಂದ 158 ಕೋಟಿ ರೂ.ನಷ್ಟವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗೋಕರ್ಣದ ಆಪ್ತ ಸ್ನೇಹಿತ ಪ್ರಮೋದ ಗಣಪತಿ ಶಾಸ್ತ್ರೀ ಅವರ ಮನೆಗೆ ಬುಧವಾರ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರೈತರು ಹಾಗೂ ಸಾರಿಗೆ ನೌಕರರ ಹೋರಾಟಗಳಲ್ಲಿ ಕೋಡಿಹಳ್ಳಿ ಭಾಗಿಯಾಗಿದ್ದರು. ಪರಿಣಾಮ ರಾಜ್ಯಕ್ಕೆ ಭಾರೀ ನಷ್ಟವಾಯಿತು. ಅಷ್ಟೇ ಅಲ್ಲದೆ ರಾಜ್ಯದ ಜನತೆ ಹಾಗೂ ಪ್ರಯಾಣಿಕರು ತತ್ತರಿಸಿ ಹೋಗುವಂತೆ ಮಾಡಿದ್ದಾರೆ. ಇದು ಬೇಜವಾಬ್ದಾರಿಯ ವರ್ತನೆ. ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದ್ದರೆ ಕಾಂಗ್ರೆಸ್‌ ಪಕ್ಷ ಸೇರಲಿ ಎಂದು ಕಿಡಿಕಾರಿದರು.

Edited By : Vijay Kumar
PublicNext

PublicNext

17/12/2020 12:53 pm

Cinque Terre

72.77 K

Cinque Terre

5

ಸಂಬಂಧಿತ ಸುದ್ದಿ