ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದ ನೂತನ ಗೋಹತ್ಯೆ ಮಸೂದೆಯಿಂದ ಚರ್ಮೋದ್ಯಮ ಹಾಗೂ ರೈತರಿಗೆ ಹೆಚ್ಚಿನ ಪರಿಣಾಮ ಬೀರಲಿದೆ ಹಾಗಾಗಿ ವಯಸ್ಸಾದ ಜಾನುವಾರುಗಳನ್ನು ಸರ್ಕಾರವೇ ರೈತರಿಂದ ಖರೀದಿಸಿ, ಬಿಜೆಪಿ ಮುಖಂಡರ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೂತನ ಗೋಹತ್ಯೆ ನಿಷೇಧ ಮಸೂದೆಯಿಂದ ರೈತರು ಹಾಗೂ ಚರ್ಮೋದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಮತ್ತು ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ ಎಂದಿದ್ದಾರೆ.
ವಯಸ್ಸಾದ ಹಾಗೂ ರೈತರಿಗೆ ಅನುಕೂಲವಾಗದ ಜಾನುವಾರುಗಳನ್ನು ರಾಜ್ಯ ಸರ್ಕಾರವೇ ಒಂದು ದರ ನಿಗದಿ ಮಾಡಿ ಅವರಿಂದ ಖರೀದಿ ಮಾಡಬೇಕು. ಹಸುಗಳ ಮಾಲೀಕತ್ವವನ್ನು ಸರಕಾರದ ಪ್ರತಿನಿಧಿಗಳೇ ಪಡೆದು, ಮಂತ್ರಿಗಳ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ ಎಂದು ಸರಕಾರದ ವಿರುದ್ಧ ಗುಡುಗಿದ್ದಾರೆ.
PublicNext
11/12/2020 07:59 pm