ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಮಾರಸ್ವಾಮಿಯವರನ್ನು ಟೀಕಿಸುವುದು ಸಣ್ಣತನ ಎಂದ ಪ್ರತಾಪ್ ಸಿಂಹ

ಮೈಸೂರು: ಬಿಜೆಪಿಯ ಒಳ್ಳೆಯ ಕೆಲಸಗಳನ್ನು ಎಚ್. ಡಿ. ಕುಮಾರಸ್ವಾಮಿ ಅವರು ಬೆಂಬಲಿಸಿದ್ದಾರೆ. ಹೀಗಾಗಿ, ರಾಜಕೀಯ ಕಾರಣಕ್ಕೆ ಅವರನ್ನು ಟೀಕಿಸುವುದು ಸಣ್ಣತನವಾಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಭೂ ಸುಧಾರಣಾ ಕಾಯ್ದೆಗೆ ಜಾತ್ಯತೀತ ಜನತಾದಳ ಬೆಂಬಲ ಸೂಚಿಸಿರೋದು ಸಂತಸದ ಸಂಗತಿ ಎಂದಿದ್ದಾರೆ.

ಕುಮಾರಸ್ವಾಮಿ ಅವರೊಬ್ಬ ರೈತನ ಮಗ ಎಂದು ಹೊಗಳಿದ ಪ್ರತಾಪ್ ಸಿಂಹ, ಇದೇ ಕಾರಣಕ್ಕಾಗಿ ರೈತರು ಹಾಗೂ ಗೋವಿನ ಬಗ್ಗೆ ಅವರಿಗೆ ಗೊತ್ತಿದೆ. ಹೀಗಾಗಿ ಅವರು ನಮ್ಮ ಸರ್ಕಾರ ಜಾರಿ ಮಾಡಿದ ಕಾಯ್ದೆಯನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು. ಕೇವಲ ರಾಜಕೀಯ ಕಾರಣಕ್ಕಾಗಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡುವುದು ಸರಿಯಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾಗ 20-20 ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿದ್ದರು. ರೈತರ ಸಾಲ ಮನ್ನಾದಂತಹ ರೈತಪರ ಕಾರ್ಯಕ್ರಮವನ್ನು ಅವರು ನೀಡಿದ್ದರು ಎಂದು ಪ್ರತಾಪ್ ಸಿಂಹ ಸ್ಮರಿಸಿದರು.

Edited By : Nagaraj Tulugeri
PublicNext

PublicNext

11/12/2020 03:55 pm

Cinque Terre

63.58 K

Cinque Terre

9

ಸಂಬಂಧಿತ ಸುದ್ದಿ