ಮೈಸೂರು: ಕಾಂಗ್ರೆಸ್‌ನವರ ಸಹವಾಸ ಮಾಡಿ ನಾವು ಸರ್ವನಾಶವಾಗಿದ್ದೇವೆ. ಅದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೆ 5 ವರ್ಷ ನಾನೇ ಮುಖ್ಯಮಂತ್ರಿಯಾಗುತ್ತಿದ್ದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಟೀಂ ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ಜೆಡಿಎಸ್ ಬಿ ಟೀಂ ಎಂದು ಹೇಳಿ ನನ್ನ ಹೆಸರು ಹಾಳು ಮಾಡುವ ಹುನ್ನಾರ ನಡೆಸಿದರು. ಪಕ್ಷದ ವರಿಷ್ಠ, ತಂದೆ ಎಚ್.ಡಿ.ದೇವೇಗೌಡ ಅವರಿಗೆ ಅವರದ್ದೇ ಆದ ಕಮಿಟ್ ಮೆಂಟ್ ಇತ್ತು. ಹಾಗಾಗಿ ಅವರ ಮನಸ್ಸಿಗೆ ನೋವಾಗಬಾರದೆಂದು ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಆದರೆ ಸಿದ್ದರಾಮಯ್ಯ ಹಾಗೂ ಟೀಂ ನಮ್ಮನ್ನೇ ಸರ್ವನಾಶ ಮಾಡಿದರು ಎಂದು ಆರೋಪಿಸಿದರು.
ನಾವು ಬೆಳೆಸಿದವರೇ ನಮ್ಮ ವಿರುದ್ಧ ಮಾತನಾಡುತ್ತಾರೆ ಎನ್ನುವ ಶಾಪ ನಮ್ಮ ಕುಟುಂಬಕ್ಕೆ ಇದೆ. ಶಾಪ ವಿಮೋಚನೆ ಹೇಗೆ ಎಂದು ಕಂಡುಹಿಡಿಯಬೇಕು. ಸಿದ್ದರಾಮಯ್ಯ ಪ್ರೀ ಪ್ಲ್ಯಾನ್ ಮಾಡಿ ನನ್ನ ಟ್ರ್ಯಾಪ್ ಮಾಡಿದರು. ಹೀಗಾಗಿ ನಾನು ಸಿಎಂ ಸ್ಥಾನ ಕಳೆದುಕೊಂಡೆ ಎಂದು ವಾಗ್ದಾಳಿ ನಡೆಸಿದರು.
PublicNext
05/12/2020 03:52 pm