ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ: ಹಳ್ಳಿಹಕ್ಕಿ ಮೇಲೆ ಸಿದ್ದು ಕಿಡಿ

ಮೈಸೂರು: ಏಕವಚನದ ಮಾತು ಕಡಿಮೆ ಮಾಡಿ ಎಂದು ಹೇಳಿಕೆ ನೀಡಿದ್ದ ಎಂಎಲ್‍ಸಿ ಹೆಚ್ ವಿಶ್ವನಾಥ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಶ್ವನಾಥ್ ಎಷ್ಟು ಏಕವಚನದಲ್ಲಿ ಮಾತನಾಡಿದ್ದಾನೆ ಎಂದು ನಾನು ತೋರಿಸ್ಲಾ? ಕೆ.ಆರ್.ನಗರ ಶಾಸಕನ ಬಗ್ಗೆ ಎಷ್ಟು ಮಾತನಾಡಿದ್ದಾನೆ ತೋರಿಸಬೇಕಾ ಎಂದು ಏಕವಚನದಲ್ಲೇ ವಿಶ್ವನಾಥ್‍ಗೆ ತಿರುಗೇಟು ನೀಡಿದರು.

ನನ್ನದು ಹಳ್ಳಿ ಭಾಷೆ, ಹಾಗಾಗಿ ಅದು ಏಕವಚನ ಅನ್ನಿಸುತ್ತದೆ. ನಾನು ಉದ್ದೇಶವಾಗಿ ಏಕವಚನ ಬಳಸೋಲ್ಲ ಅದು ತಾನಾಗಿಯೇ ಬರೋದು. ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ಮಹದೇಶ್ವರರು ಅಂತ ಕರೆಯುತ್ತಾರಾ? ಯಾವ ದೇವರನ್ನಾದರೂ ಬಹುವಚನದಲ್ಲಿ ಕರೆದಿರೋದು ನೋಡಿದ್ದೀರಾ? ವಿಶ್ವನಾಥ್‍ ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ವಾಗ್ದಾಳಿ ಮಾಡಿದರು.

Edited By : Nagaraj Tulugeri
PublicNext

PublicNext

04/12/2020 04:01 pm

Cinque Terre

155.06 K

Cinque Terre

15

ಸಂಬಂಧಿತ ಸುದ್ದಿ