ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುತ್ತಿನ ನಗರಿಯಲ್ಲಿ ಟಿಆರ್ ಎಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ

ಹೈದರಾಬಾದ್ : ಇಂದು ಹೈದರಾಬಾದ್ ಮಹಾನಗರ ಪಾಲಿಕೆ(GHMC) ಚುನಾವಣೆ ಶಾಂತಿಯುತವಾಗಿ ಮತದಾನದ ನಡೆಯುವ ವೇಳೆ, ಆಡಳಿತಾರೂಢ ಟಿಆರ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಟಿಆರ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ.

ಇಲ್ಲಿನ ಕುಕತ್ ಪಲ್ಲಿ ಮತದಾನ ಕೇಂದ್ರದ ಬಳಿ ಟಿಆರ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಈ ವೇಳೆ ಟಿಆರ್ ಎಸ್ ನಾಯಕರನ್ನೂ ಬಿಜೆಪಿ ಕಾರ್ಯಕರ್ತರು ಎಳೆದಾಡಿದ್ದಾರೆ ಎನ್ನಲಾಗಿದ್ದು, ತಮ್ಮ ನಾಯಕರನ್ನು ರಕ್ಷಿಸಲು ಟಿಆರ್ ಎಸ್ ಕಾರ್ಯಕರ್ತೂ ಕೂಡ ಆವೇಶಭರಿತರಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

01/12/2020 07:27 pm

Cinque Terre

49.6 K

Cinque Terre

3