ನವದೆಹಲಿ: ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅವಕಾಶ ನೀಡಬೇಕು ಎಂದು ಹೇಳಿರುವ ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೋ ಅವರಿಗೆ ಭಾರತ ಸೂಕ್ತ ತಿರುಗೇಡು ನೀಡಿದೆ.
ಜಸ್ಟಿನ್ ಟ್ರುಡಿಯೋ ಬೆಂಬಲ ನೀಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಭಾರತದಲ್ಲಿನ ರೈತರ ಪ್ರತಿಭಟನೆಗಳ ಕುರಿತು ಹೇಳಿಕೆ ನೀಡಿದ ಮೊದಲ ಅಂತಾರಾಷ್ಟ್ರೀಯ ನಾಯಕರಾಗಿದ್ದಾರೆ. ಇದಕ್ಕೆ ಸೂಕ್ತ ತಿರುಗೇಟು ನೀಡಿರುವ ಭಾರತ, ಕೆನಡಾ ಪ್ರಧಾನಿ ಅವರ ಹೇಳಿಕೆ ಅನಪೇಕ್ಷಿತ ಹಾಗೂ ಅನಗತ್ಯ ಎಂದು ಹೇಳಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ, 'ಭಾರತದ ಆಂತರಿಕ ವಿಚಾರಗಳಲ್ಲಿ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಮೂಗು ತೂರಿಸಿರುವುದು ಆಶ್ವರ್ಯ ತಂದಿದೆ. ಭಾರತ ಒಂದು ಪ್ರಜಾತಾಂತ್ರಿಕ ದೇಶವಾಗಿದ್ದು, ಇಲ್ಲಿ ಸರ್ಕಾರಗಳೊಂದಿಗೆ ಸಮಾಜದ ವಿವಿಧ ವರ್ಗಗಳ ಭಿನ್ನಾಭಿಪ್ರಾಯ ಸಹಜ ಪ್ರಕ್ರಿಯೆ. ರೈತರ ಪ್ರತಿಭಟನೆ ಕೂಡ ಇಂತದ್ದೇ ಭಿನ್ನ ನಿಲುವಿನ ಭಾಗವಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಭಾರತ ಶಕ್ತವಾಗಿದೆ' ಎಂದು ತಿಳಿಸಿದ್ದಾರೆ.
PublicNext
01/12/2020 05:39 pm